ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರಾವಳಿಯಲ್ಲಿ ಈಗ ತುಳು ಸಿನಿಮಾಕ್ಕೆ ತುಂಬಾ ಬೇಡಿಕೆ ಇದೆ. ಹೌದು ಇಲ್ಲಿ ಯಶಸ್ವೀ ನಿರ್ಮಾಪಕರಿದ್ದಾರೆ, ಅನುಭವಿ ನಿರ್ದೇಶಕರಿದ್ದಾರೆ, ಪ್ರತಿಭಾವಂತ ಕಲಾವಿದರಿದ್ದಾರೆ.
ಆದರೆ ಈಗ ಮಹಾಮಾರಿ ಕೊರೋನಾದಿಂದಾಗಿ ಸಿನಿಮಾರಂಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ ,ಮುಂದೆ ಕೊರೋನಾ ಮುಕ್ತವಾದ ಬಳಿಕ ಸಾಲುಸಾಲು ಯಶಸ್ವಿ ಸಿನಿಮಾಗಳು ಬಿಡುಗಡೆಗಾಗಿ ಕಾದಿದೆ ,ಅನೇಕ ಸಿನಿಮಾಗಳು ಚಿತ್ರೀಕರಣಕ್ಕೆ ಸಿದ್ಧವಾಗಿದೆ, ಆದಷ್ಟು ಬೇಗ ಕೋರೋಣ ದೂರವಾಗಿ ಎಲ್ಲವೂ ಯಶಸ್ವಿಯಾಗಿ ಮುಂದೆ ಸಾಗಲಿ ಎನ್ನುವುದೇ ನಮ್ಮ ಪ್ರಾರ್ಥನೆ.
ಹೌದು ಮೊದಲು ಹೇಳಿದಂತೆ ತುಳು ಚಿತ್ರರಂಗದಲ್ಲಿ ಯಶಸ್ವಿ ತುಳುವ ನಿರ್ಮಾಪಕರಿದ್ದಾರೆ, ನಿರ್ದೇಶಕರಿದ್ದಾರೆ, ತಂತ್ರಜ್ಞರಿದ್ದಾರೆ, ಕಲಾವಿದರಿದ್ದಾರೆ , ಆದರೆ ಸಾಹಸ ನಿರ್ದೇಶಕರ ಕೊರತೆ ಎದ್ದುಕಾಣುತ್ತಿದೆ ಅದಕ್ಕೆ ಅಪವಾದ ಎಂಬಂತೆ ನಮ್ಮೂರಿನ ತುಳುವ ಕುವರ ಸಾಹಸ ನಿರ್ದೇಶಕರೊಬ್ಬರು ಸದ್ದಿಲ್ಲದೆ ಸುದ್ದಿ ಮಾಡುತ್ತಿದ್ದಾರೆ ಅವರೇ ಸುರೇಶ್ ಶೆಟ್ಟಿ.
35 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ (ಮಾರ್ಷಲ್ ಆರ್ಟ್ಸ್) ಪ್ರಶಸ್ತಿಯನ್ನು ಗಳಿಸಿ ಸಾಹಸ ನಿರ್ದೇಶನಕ್ಕೆ ಇಳಿದಿರುವ ನಮ್ಮ ಮಂಗಳೂರಿನ ಹೆಮ್ಮೆಯ ಕುವರ ಸುರೇಶ್ ಶೆಟ್ಟಿ, 1998ರಲ್ಲಿ ರಾಜ್ಯಮಟ್ಟದ ಚಾಂಪಿಯನ್, 2004ರಲ್ಲಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಆಗಿರುತ್ತಾರೆ ,ಇದು ತುಳುವರಿಗೆ ಹೆಮ್ಮೆಯ ವಿಷಯ.
ಸಾಹಸ ಪ್ರದರ್ಶನದಲ್ಲಿ ಉತ್ತಮ ಆಸಕ್ತಿಯಿದ್ದ ಸುರೇಶ್ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಚಿತ್ರರಂಗಕ್ಕೆ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ತಮಿಳು ಹಾಗೂ ರಾಜಸ್ಥಾನಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದು ಅನುಭವ ಪಡೆದುಕೊಂಡ ಶೆಟ್ರು, ಸ್ವತಂತ್ರ ನಿರ್ದೇಶಕರಾಗಿ ತುಳುವಲ್ಲಿ *”ಪಿರ್ಕಿಲು”* *”ಬಲಿಪೆ”* ಚಿತ್ರಗಳಲ್ಲಿ ದುಡಿದು ಸೈ ಎನಿಸಿಕೊಂಡಿದ್ದಾರೆ, ಮುಂದೆ ಚಿತ್ರೀಕರಣವಾಗುತ್ತಿರುವ *”ಪಿಲಿ ಪಂಜರ”* ಎಂಬ ತುಳುಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.
ಇನ್ನು ಮುಂದೆ ಹೊರರಾಜ್ಯದಿಂದ ತುಳುಚಿತ್ರಕ್ಕೆ ಸಾಹಸ ನಿರ್ದೇಶಕರನ್ನು ತರಿಸುವ ಅಗತ್ಯವಿಲ್ಲ, ನಮ್ಮೂರಿನ ಪ್ರತಿಭೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಸುರೇಶ್ ಅವರಿಗೆ ಮುಂದಿನ ದಿನಗಳಲ್ಲಿ ತುಳು ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಅವಕಾಶ ಕೊಟ್ಟು ಅವರ ಕಲೆಯನ್ನು ಬೆಳಗ ಬೇಕಾಗಿರುವುದು ತುಳುವರ ಕರ್ತವ್ಯ, ಮುಂದಿನ ದಿನಗಳಲ್ಲಿ ನಿರ್ಮಾಪಕರು ನಿರ್ದೇಶಕರು ನಮ್ಮ ಮಣ್ಣಿನ ಪ್ರತಿಭೆಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ ಸುರೇಶ್ ಶೆಟ್ಟಿ ಅವರ ದೂರವಾಣಿ ಸಂಖ್ಯೆ 8904123456.
ಸುರೇಶ್ ಶೆಟ್ಟಿಯವರೇ ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಅವಕಾಶಗಳು ಸಿಗಲಿ, ಆ ಮುಖೇನ ವಿಭಿನ್ನ ರೀತಿಯ ಸಾಹಸಗಳನ್ನು ತುಳು ಚಿತ್ರಗಳಲ್ಲಿ ನೋಡುವಂತಾಗಲಿ ಎಂದು ಈ ಮೂಲಕ ನಿಮಗೆ ಶುಭ ಹಾರೈಸುತ್ತೇನೆ.
-ರಮೇಶ್ ರೈ ಕುಕ್ಕುವಳ್ಳಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.