ಅಮ್ಚಿನಡ್ಕ(www.vknews.com) : ಅಲ್ ಬದ್ರಿಯಾ ಯೂತ್ ವಿಂಗ್ ಅಮ್ಚಿನಡ್ಕ ಇದರ ವತಿಯಿಂದ ಸ್ವಾತಂತ್ರ್ಯದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿ ಮುಂಭಾಗದಲ್ಲಿ ಜರುಗಿತು.
ಸ್ಥಳೀಯ ಖತೀಬರಾದ ಅಬ್ದುಲ್ ಸಲಾಂ ಫೈಝಿಯವರ ಪ್ರಾರ್ಥನೆಯ ಮೂಲಕ ಚಾಲನೆಗೊಂಡಿತು. ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣಗೈದರು. ಅಬ್ದುಲ್ ಸಲಾಂ ಫೈಝಿಯವರು ಸಂದೇಶ ಭಾಷಣ ಮಾಡಿದರು.
ನಂತರ ಯೂತ್ ವಿಂಗ್ ಕಾರ್ಯದರ್ಶಿ ಸಿದ್ದೀಕ್ MK ಪ್ರತಿಜ್ಞೆ ಭೋದಿಸಿದರು. ಯೂತ್ ವಿಂಗ್ ಸದಸ್ಯರು ರಾಷ್ಟ್ರ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಖಾದರ್ KK, ಯೂತ್ ವಿಂಗ್ ಉಪಾಧ್ಯಕ್ಷರುಗಳಾದ ಮಜೀದ್ ಮುಖಾರಿಮೂಲೆ ರಶೀದ್ ಅಮ್ಚಿನಡ್ಕ, ನಿಕಟ ಪೂರ್ವ ಅಧ್ಯಕ್ಷ ಸ್ವಾದಿಕ್, ಕಾರ್ಯದರ್ಶಿಗಳಾದ ರಝಾಕ್ ಬದಿಯಡ್ಕ, ಬಾತಿಷ ಅಮ್ಚಿನಡ್ಕ, ತ್ವಾಹಾ ಇಮ್ರಾನ್, ಹಸೈನಾರ್,ಸದಸ್ಯರಾದ ಕಲಂದರ್, ಸಪ್ವಾನ್, ಸಿದ್ದೀಕ್KP, ಕಾಸಿಂ PDಹಾಗೂ ಪದಾಧಿಕಾರಿಗಳು ಜಮಾಅತ್ ಮುಖಂಡರು ಮುಂತಾದವರು ಉಪಸ್ಥಿತರಿದ್ದರು. ಕೊನೆಗೆ ಸಿಹಿತಿಂಡಿ ಹಂಚಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.