ಮುಯ್ಯುದ್ದೀನ್ ಜುಮಾ ಮಸೀದಿಯ ನವೀಕೃತ ಪುನರ್ ನಿರ್ಮಾಣ ಕಾರ್ಯಕ್ರಮಕ್ಕೆ ಕೆ.ಎಸ್ ಅಲಿ ತಂಙಳ್ ಕುಂಬೋಲ್ ಅವರಿಂದ ಶಂಕುಸ್ಥಾಪನೆ

ಪುಣಚ (ವಿಶ್ವ ಕನ್ನಡಿಗ ನ್ಯೂಸ್) : ಮುಯ್ಯುದ್ದೀನ್ ಜುಮಾ ಮಸೀದಿ ಪರಿಯಾಲ್ತಡ್ಕ ಇದರ ನವೀಕೃತ ಪುನರ್ ನಿರ್ಮಾಣ ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಕುಂಬೋಲ್ ಕುಟುಂಬದ ಕೆ.ಎಸ್ ಅಲಿ ತಂಙಳ್ ಕುಂಬೋಲ್ ಅವರು ತಮ್ಮ ದಿವ್ಯ ಹಸ್ತದಿಂದ ನೆರವೇರಿಸಿದರು.

ಶಂಕುಸ್ಥಾಪನೆಯನ್ನು ನೆರವೇರಿಸಿದ ಬಳಿಕ ಕೆ.ಎಸ್ ಅಲಿ ತಂಙಳ್ ಕುಂಬೋಲ್ ಅವರು ಜಮಾಅತಿನ ಪ್ರತಿಯೊಬ್ಬರೂ ಮಸೀದಿಗೆ ಬಂದು ಮಸೀದಿಯನ್ನು ಧನ್ಯಗೊಳಿಸಬೇಕು ಎಂದು ಹಿತವಚನ ನೀಡಿದರು. ಜಮಾಅತಿನ ಅಧ್ಯಕ್ಷರಾದ ಎಂ. ಎಸ್ ಮಹಮ್ಮದ್ ಆಗಮಿಸಿದ ಸರ್ವರನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಜಮಾಅತಿನ ಖತೀಬರಾದ ಬಹು. ಹೈಸೈನಾರ್ ಫೈಝಿ ಅವರು ಮುಖಾಮ್ ಝಿಯಾರತ್ ಗೆ ನೇತೃತ್ವ ವಹಿಸಿದರು.

ಈ‌ ಸಂದರ್ಭದಲ್ಲಿ ಜಮಾಅತಿನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಬಿ.ಕಾಂ, ಸದರ್ ಉಸ್ತಾದ್ ಬಹು. ಅಬೂಬಕ್ಕರ್ ಸಿದ್ದೀಕ್ ರಝ್ವಿ, ಬಹು ಬಶೀರ್ ಮದನಿ ಉಸ್ತಾದ್, ಬಹು. ಫಾರೂಕ್ ಹನೀಫಿ ಉಸ್ತಾದ್ ಅಜ್ಜಿನಡ್ಕ, ನೀರ್ಕಜೆ ಖತೀಬರಾದ ನಝೀರ್ ಸಹದಿ, ಅಬ್ದುಲ್ ರಹಿಮಾನ್ ಉಸ್ತಾದ್ ಪರಿಯಾಲ್ತಡ್ಕ, ಇಂಜಿನಿಯರ್ ರಫೀಕ್ ದಂಬೆ, ಆಡಳಿತ ಮಂಡಳಿ ಸದಸ್ಯರು ಮತ್ತು ಜಮಾಅತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಆಗಮಿಸಿದ ಸರ್ವರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...