ಮನಾಮ(www.vknews.in): ಬಹರೈನ್ ಮೇ 21ರಿಂದ ಜಾರಿಗೆ ಬರುವಂತೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಲದ ಸಂದರ್ಶಕರಿಗೆ ಪ್ರವೇಶ ಅನುಮತಿ ನಿರಾಕರಿಸಿದೆ. ಈ ನಾಲ್ಕು ದೇಶಗಳ ಪ್ರಜೆಗಳು ಬಹರೈನಿನ ರೆಸಿಡೆನ್ಸಿ ವೀಸಾ ಹೊಂದಿದ್ದಲ್ಲಿ ಮಾತ್ರ ಬಹರೈನ್ ಪ್ರವೇಶ ಅನುಮತಿಸಲಾಗಿದೆ. ಈ ನಿಷೇಧವು ಜೂನ್ 2ರ ತನಕ ಜಾರಿಯಲ್ಲಿರುತ್ತದೆ.
ಬಹರೈನ್ ನ ಈ ಹೊಸ ನಿಯಮದಿಂದಾಗಿ ಬಹರೈನ್ ಮೂಲಕ ಸೌದಿ ಅರೇಬಿಯಾ ತೆರಳಲು ಸಿದ್ಧರಾಗಿದ್ದ ಲಕ್ಷಾಂತರ ಭಾರತೀಯರ ಪ್ರಯಾಣಕ್ಕೆ ತೊಡಕುಂಟಾಗಿದೆ. ಈ ಹೊಸ ನಿಯಮದಿಂದಾಗಿ ಸದ್ಯ ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದು ಅಸಾಧ್ಯವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.