ದುಬೈ(www.vknews.in):ದುಬೈಯ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಜಾಹಿರಾತು ಚಿತ್ರೀಕರಣ ಮಾಡಿದ ಪ್ರಥಮ ವಿಮಾನ ಕಂಪನಿ ಎಂಬ ಹೆಗ್ಗಳಿಕೆಗೆ ಎಮಿರೇಟ್ಸ್ ಪಾತ್ರವಾಗಿದೆ. 30 ಸೆಕೆಂಡ್ಗಳ ಜಾಹೀರಾತು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್ ನೋಡಿದ ಪ್ರತಿಯೊಬ್ಬರೂ ಗಾಬರಿ, ಭಯ ವ್ಯಕ್ತಪಡಿಸುತ್ತಿದ್ದಾರೆ. ‘ಹಾಯ್ ಮೋಮ್, ಐ ಎಮ್ ಎಟ್ ಟಾಪ್ ಆಫ್ ದ ವರ್ಲ್ಡ್’ ಎನ್ನುವ ಈ ಜಾಹಿರಾತು ವ್ಯಾಪಕ ಜನಪ್ರಿಯತೆಗೆ ಹಾದೂ ಮೆಚ್ಚುಗೆಗೆ ಪಾತ್ರವಾಗಿದೆ. ಜಾಹೀರಾತಿನಲ್ಲಿ ಮೊದಲು ಮಾಡೆಲ್ ನಿಕೋಲ್ ಅವರನ್ನು ಜೂಮ್ನಲ್ಲಿ ತೋರಿಸಲಾಗುತ್ತದೆ. ಆದರೆ ನಂತರ ಕ್ಯಾಮರಾವನ್ನು ಹಿಂದೆ ತೆಗೆದುಕೊಂಡು ಬಂದಂತೆ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಆಕೆ ನಿಂತಿರುವ ಒಂದು ಸಮಗ್ರ ನೋಟ ಕಾಣಿಸುತ್ತಿದೆ. ಆ ಕ್ಷಣ ನಿಮ್ಮ ಮೈ ಜುಂ ಅನ್ನುವುದು ಖಂಡಿತ. ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ 828 ಮೀಟರ್ ಎತ್ತರವಿದ್ದ, ಕಟ್ಟಡದ ತುತ್ತ ತುದಿಯಲ್ಲಿ ಕೇವಲ 1.2 ಮೀಟರ್ ನಷ್ಟು ಮಾತ್ರ ಜಾಗವಿದ್ದು ಇಲ್ಲಿ ಗಾಳಿಯ ಒತ್ತಡಕ್ಕೆ ಹೊಂದಿಕೊಂಡು ನಿಲ್ಲಬೇಕಾಗಿದ್ದು, ಇಲ್ಲಿ ಜಾಹಿರಾತಿಗೆ ಫೋಸ್ ನೀಡುವುದೆಂದರೆ ಅದೊಂದು ದೊಡ್ಡ ಸಾಧನೆಯೇ ಸರಿ. ಹಾಗಾಗಿ ಕೆಲವು ದಿನಗಳ ಅಭ್ಯಾಸದಿಂದ ಈ ಜಾಹಿರಾತು ಚಿತ್ರೀಕರಣ ಮಾಡಲಾಗಿದೆ ಎಂದು ಎಮಿರೇಟ್ಸ್ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.