ವಿಜಯನಗರ (ವಿಶ್ವ ಕನ್ನಡಿಗ ನ್ಯೂಸ್) : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಯುವ ರಂಗಕಲಾವಿದ ಹಾಗೂ ಪುರಾಣ ಪ್ರವಚನಕಾರರಾದ ಅಗಸಗಟ್ಟೆ ತಿಂದಪ್ಪ ರವರು, ಕರುನಾಡ ಹರಿಕಾರಶ್ರೀ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕರುನಾಡ ಸೇವ ಟ್ರಸ್ಟ್ ವಿವಿದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತರುವ,ರಾಜ್ಯದ ವಿವಿದ ಭಾಗಗಳ ಗಣ್ಯಮಾನ್ಯರನ್ನು ಗುರುತಿಸಿದೆ.ಸಂಸ್ಥೆಯು ಅವರಿಗೆ ರಾಜ್ಯಮಟ್ಟದ “ಕರುನಾಡ ಹರಿಕಾರಶ್ರೀ” ಪ್ರಶಸ್ತಿ ಗೌರವಿಸುತ್ತಿದೆ. ಅ9ರಂದು ಮಂಡ್ಯದಲ್ಲಿ ಟ್ರಸ್ಟ್ ಆಯೋಜಿಸಿರುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಲ್ಲಿ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಯುವ ರಂಗಕಲಾವಿದ ಅಗಸಗಟ್ಟೆ ತಿಂದಪ್ಪರಿಗೆ ಟ್ರಸ್ಟ್ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ ಎಂದು ಟ್ರಸ್ಟ್ ನ ಪ್ರಮುಖರಾದ ಅಭಿನಂದನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.