ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಸಂಗೀತ ವಿದ್ವಾನ್ ಪಿ.ಜೆ.ಬ್ರಹ್ಮಾಚಾರಿ ಮತ್ತು ಶಿಷ್ಯರಿಂದ ಮಲ್ಲಿಗೆಯ ಮಾಲೂರಿನ ರಾಧಾಕೃಷ್ಣ ಧ್ಯಾನ ಮಂದಿರದಲ್ಲಿ ಅಕ್ಟೋಬರ್ 30 ರ ಶನಿವಾರ 3 ಗಂಟೆಗೆ ಶ್ರೀ ವಿಷ್ಣುಪ್ರಿಯ ಸಂಗೀತ ಪಾಠ ಶಾಲೆ ವತಿಯಿಂದ ವಾದ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿ ರಾಜ್ಯದ ಹೆಸರಾಂತ ಸಂಗೀತ ವಿದ್ವಾಂಸರಾದ ಮಾಲೂರಿನ ಪಿ.ಜೆ.ಬ್ರಹ್ಮಚಾರಿ ರವರು ” ರಾಧಕೃಷ್ಣ ಧ್ಯಾನ ಮಂದಿರದಲ್ಲಿ ಶ್ರೀಮತಿ ಎಂ.ಜಲಜಾ ಮತ್ತು ಎಂ.ಪಿ.ನಾಗರಾಜ್ ಹಾಗೂ ರಾಧಾಕೃಷ್ಣ (ಆರ್ಚಕರ) ಸಹಕಾರದಲ್ಲಿ ವೈಲಿನ್, ಕೀಬೋರ್ಡ್, ಮತ್ತು ಹಾರ್ಮೋನಿಯಂ ವಾದ್ಯಗಳ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ವಿಶಿಷ್ಟ ಕಾರ್ಯದ ಮೂಲಕ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ, ಕೆಲಸ ಮಾಡುತ್ತಿದ್ದೇವೆ” ಎಂದರು.
ತಾಳ ವಾದ್ಯ ಸಹಕಾರ: ಮೃದಂಗ ಎಂ.ಶಂಕರ್, ಖಂಜಿರ-ಬಿ.ಎಸ್.ಓಂಕಾರ್
ಎಲ್ಲಾ ವಾದ್ಯ ಪ್ರಿಯರು, ಸಂಗೀತ ಪ್ರಿಯರು ಬನ್ನಿ ಭಾಗವಹಿಸಿ ಪ್ರೋತ್ಸಾಹಿಸಿ…
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.