ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ತಡೆಗೋಡೆ ಇಲ್ಲದ ಕಾರಣ ಟಾಟಾ ಎಸಿ ವಾಹನ ಹಾಗೂ ಸ್ಕಾರ್ಪಿಯೋ ವಾಹನದ ನಡುವೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಎಸಿ ವಾಹನವು ಕೆಳಗೆ ಬಿದ್ದ ಪರಿಣಾಮ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ. ಸ್ಕಾರ್ಪಿಯೋ ವಾಹನವು ಸಹ ನಜ್ಜುಗುಜ್ಜಾಗುವ ಮೂಲಕ ವಾಹನಗಳಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿ ಸಣ್ಣಪುಟ್ಟಗಾಯಗಳಾಗಿವೆ.
ಮಾಲೂರು ಪಟ್ಟಣ್ಣದಿಂದ ಲಕ್ಕೂರು ಮಾರ್ಗವಾಗಿ ಚಂದಾಪುರಕ್ಕೆ ಬರುತ್ತಿದ್ದ ಸ್ಕಾರ್ಪಿಯೋ ವಾಹನ KA-04 MJ 2657 ಹಾಗೂ ತಿರುಮಲಶೆಟ್ಟಿಹಳ್ಳಿ ಮಾರ್ಗದಿಂದ ಲಕ್ಕೂರು ಮಾರ್ಗವಾಗಿ ಮಾಲೂರು ಕೈಗಾರಿಕಾ ಪ್ರದೇಶಕ್ಕೆ ಹೋಗುತ್ತಿದ್ದ ಟಾಟಾ ಎಸಿ KA-04 C 6127 ಲಕ್ಕೂರು ಕೆರೆಯ ಕಟ್ಟೆಯ ಮೇಲೆ ತಡೆಗೋಡೆ ಇಲ್ಲದ ಪರಿಣಾಮ ಕ್ರಾಸ್ ಮಾಡಲು ಕಷ್ಟವಾದ ಕಾರಣ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಎಸಿ ಯಲ್ಲಿದ್ದ ಶಾಶಂಕ್, ಪುನೀತ್ ಹಾಗೂ ಸ್ಕಾರ್ಪಿಯೋ ವಾಹನದಲ್ಲಿದ್ದ ರಾಜು, ಮಣಿ ರವರು ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಲಕ್ಕೂರು ಕೆರೆ ಕೆಟ್ಟೆಯ ಮೇಲಿನ ತಡೆಗೋಡೆ ಇಲ್ಲದ ಬಗ್ಗೆ ಅನೇಕ ಬಾರಿ ಪತ್ರಿಕೆಗಳಲ್ಲಿ ಪ್ರಕಟವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹೋದರೂ ಸಹ ಕೈ ಕಟ್ಟಿ ಕುಳಿತಿರುವುದು ಸರಿಯಿಲ್ಲ, ಹತ್ತು ಹಲವು ಅಪಘೌತಗಳು ಸಂಭವಿಸಿ ಆಗಿರುವ ಅನಾಹುತ ಹಾಗೂ ಮುಂದೆ ಸಂಭವಿಸಬಹುದಾದ ಎಲ್ಲಾ ಅನಾಹುತಗಳಿಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಆಗಿರುತ್ತಾರೆ.ಇನ್ನಾದರೂ ಎಚ್ಚೆತ್ತು ಕೆರೆಕಟ್ಟೆಯ ಮೇಲೆ ತಡೆಗೋಡೆ ನಿರ್ಮಿಸಲಿ ಎಂಬುದೇ ನಮ್ಮ ಆಶಯ” ಎಂದರು.
ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯ) ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್ ಮಾತನಾಡಿ “ಲಕ್ಕೂರು ಕೆರೆಯ ಕಟ್ಟೆಯ ಮೇಲಿನ ದಿನನಿತ್ಯದ ಅಪಘೌತಗಳನ್ನು ನೋಡಿದಾಗ ಜನಸಾಮಾನ್ಯರ ಜೀವದ ಜೋತೆ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಇಲಾಖೆ ಅದರಲ್ಲೂ ಲೋಕಪಯೋಗಿ ಇಲಾಖೆ ಕೂಡಲೇ ಎಚ್ಚೆತ್ತು ಕೆರೆಯ ಕಟ್ಟೆಯ ಮೇಲೆ ತಡೆಗೋಡೆ ನಿರ್ಮಿಸುವ ಮೂಲಕ ಸಹಕರಿಸಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಸಂಬಂಧಪಟ್ಟ ಇಲಾಖೆಯ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.