(www.vknews.com) ; ಭಾರತದ ಮೊದಲ ಮುಸ್ಲಿಮ್ ಮಹಿಳಾ ಶಿಕ್ಷಕಿ, ತಾಯಿ ಫಾತಿಮಾ ಶೇಖ್’ರವರ ಜನ್ಮದಿನವಾದ ಇಂದು (ಜ.9) ಗೂಗಲ್ ಸಂಸ್ಥೆಯು ಡೂಡಲ್ ರಚಿಸುವ ಮೂಲಕ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿದೆ.
ದಲಿತರಿಗೆ ಶಿಕ್ಷಣ ನೀಡಲು ಮುಂದಾದ ಒಂದೇ ಕಾರಣಕ್ಕೆ ತಮ್ಮ ಮನೆಯಿಂದ ಹೊರ ಹಾಕಲ್ಪಟ್ಟ ಸಮಾಜ ಸುಧಾರಕರಾಗಿದ್ದ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯವರಿಗೆ ಫಾತಿಮಾ ಶೇಖ್ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದರು.
1831 ಜನವರಿ 9ರಂದು ಪುಣೆಯಲ್ಲಿ ಜನಿಸಿದ್ದ ಫಾತಿಮಾ ಶೇಖ್ 1848ರಲ್ಲಿ ಸ್ಥಳೀಯ ಗ್ರಂಥಾಲಯವನ್ನು ಆರಂಭಿಸಿದ್ದರು. ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭವಾದ ಮೊದಲ ಶಾಲೆಗಳಲ್ಲಿ ಒಂದಾಗಿದೆ.
ಫುಲೆ ದಂಪತಿಗಳೊಂದಿಗೆ ಕೈಜೋಡಿಸಿ, ದಲಿತ ಮತ್ತು ಮುಸ್ಲಿಮ್ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿ ಕ್ರಾಂತಿಯನ್ನೇ ಮಾಡಿದ್ದ ತಾಯಿ ಫಾತಿಮಾ ಶೇಖ್’ರವರಿಗೆ ಹಾಗೂ ಇಂದು ಡೂಡಲ್ ಮೂಲಕ ಫಾತಿಮಾ ಶೇಖ್’ರನ್ನು ಗೌರವಿಸಿದ ಗೂಗಲ್ ಸಂಸ್ಥೆಗೆ ಬಿಗ್ ಸಲ್ಯೂಟ್.
ಉಮರ್ ಯು.ಹೆಚ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.