ಬದ್ರುನ್ನೀಸಾ ರು ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಪಾಸಾಗಿರುವುದು ಎಲ್ಲರಿಗೂ ಪ್ರೇರಣೆ…
(www.vknews.in) : ಬಹಳ ಅಭಿಮಾನದ ವಿಷಯ, ದೇಶದ ನಾಗರಿಕ ಸೇವೆ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿ ಸಮುದಾಯದ ನಾಲ್ವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ವರು ಪೊಲೀಸ್ ಕಾನ್ಸ್ಟೇಬಲ್ ಆಗಿರುವುದನ್ನು ಕೇಳಿ ಸಂತೋಷವಾಯಿತು. ಅದರಲ್ಲೂ ನಮ್ಮ ಉಪ್ಪಿನಂಗಡಿ ಸಮೀಪದ ಬದ್ರುನ್ನೀಸಾ ಎಂಬ ಯುವತಿಯೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಪಾಸಾಗಿರುವುದು ಹೆಮ್ಮೆ ಎನಿಸುವಂತಿದೆ.
ಮಂಗಳೂರಿನ ‘ಏಸ್’ ಐ.ಎ.ಎಸ್ ಅಖಾಡಮಿಯ ಮೂಲಕ ನಾನು ಖತೀಬ್ ಆಗಿರುವ ಮುಲ್ಕಿ ಪರಿಸರದ ಮಹಮ್ಮದ್ ಶಿಫಾಝ್, ಅದೇ ರೀತಿ ನನ್ನ ಊರಾದ ಉಪ್ಪಿನಂಗಡಿಯ ಅಡ್ಡೂರ್ ಇಸ್ಮಾಯಿಲ್ ಮತ್ತು ಝುನೈದ್ ದಂಪತಿಗಳ ನಾಲ್ಕನೇ ಪುತ್ರಿ ಬದ್ರುನ್ನೀಸಾ ರು ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಪಾಸಾಗಿರುವುದು ಎಲ್ಲರಿಗೂ ಪ್ರೇರಣೆ. ವಿಶೇಷವಾಗಿ ಬದ್ರುನ್ನೀಸಾರ ಹಿರಿಯ ಸಹೋದರಿ ಎಂಡಿ ಪಧವಿ ಪಡೆದು ಹಾಸನ ಜಿಲ್ಲೆಯಲ್ಲಿ ವೈಧ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಎರಡನೆಯಾಕೆ ಲೇಬರ್ ಆಫೀಸರ್ ಆಗಿ ನಮ್ಮ ಸಮುದಾಯದ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ನಮ್ಮ ಅತ್ಮೀಯರಾದ ಜಿ.ಎ ಬಾವಾರವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪೊಲೀಸ್ ತರಬೇತಿ ಕೇಂದ್ರದ ಇಬ್ಬರು ಯುವಕರು ಸಬ್ ಇನ್ಸ್ ಪೆಕ್ಟರ್ ಆಗಿಯೂ, ನಾಲ್ವರು ಪೊಲೀಸ್ ಕಾನ್ಸ್ಟೇಬಲ್ ಆಗಿಯೂ ಆಯ್ಕೆಯಾಗಿರುವುದು ನಮ್ಮ ಪ್ರಯತ್ನ ಖಂಡಿತಾ ಫಲ ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆ.
ಈ ಮಹಿಳೆಯರು ನಮ್ಮ ಯುವಕರಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಜನೆಯಲ್ಲಿ ಸಮಾಜದ ಯುವಕರು ಎಲ್ಲೊ ಒಂದು ಕಡೆ ಹಿಂದೆ ಬಿದ್ದಿದ್ದು ಇದನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಯುವಕರೂ ಇದೇ ರೀತಿ ದೇಶ ಸೇವೆಗಯ್ಯಲು ಅನುಕೂಲವಾಗುವಂತೆ ಕಲಿಕೆಯಲ್ಲಿ ಶೃದ್ದೆ ವಹಿಸುವುದೇ ಅಲ್ಲದೇ ಸಂಘ ಸಂಸ್ಥೆಗಳು ಯುವಕರಿಗೆ ಮಾರ್ಗದರ್ಶನವನ್ನೂ ನೀಡ ಬೇಕಿದೆ. ಪುತ್ತೂರು ಕಮ್ಯುನಿಟಿ ಸೆಂಟರ್ ಈ ನಿಟ್ಟಿನಲ್ಲಿ ತೊಡಗಿಸಿ ಕೊಂಡಿದ್ದು ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಇಂತಹ ಸೆಂಟರ್ ಅಗತ್ಯವಿದೆ.
ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.