ವಿ.ಕೆ ನ್ಯೂಸ್ (ಮಾಲೂರು): ಮಾಜಿ ಶಾಸಕರು ಹಾಗೂ ನಿಗಮ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್ ನಾಯಕರಾದ ಎ.ನಾಗರಾಜ್ ರವರಿಗೆ ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಅಭಿನಂದನೆ ಅರ್ಪಿಸಿ ಮಾತನಾಡುತ್ತಾ “ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವದ ಅಭಿಯಾನಕ್ಕೆ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಮಾಲೂರು ಕಾಂಗ್ರೆಸ್ ಪಕ್ಷದ ಧುರೀಣರು, ಹಿರಿಯರು, ಮಾರ್ಗದರ್ಶಕರು ಹಾಗೂ ಮಾಜಿ ಶಾಸಕರಾದ ಎ.ನಾಗರಾಜ್ ರವರನ್ನು ಸನ್ಮಾನಿಸಿ ಶುಭಹಾರೈಸಲಾಗಿದೆ ಅವರಿಗೆ ಇನ್ನೂ ಉತ್ತಮ ಸ್ಥಾನಮಾನಗಳು ಸೀಗಲಿ” ಎಂದರು.
ಮಾಜಿ ಶಾಸಕರಾದ ಎ.ನಾಗರಾಜ್ ರವರು ಮಾತನಾಡಿ “ಕಾಂಗ್ರೆಸ್ ಪಕ್ಷದ ಪ್ರಮುಖ ಸಿದ್ದಾಂತಗಳ ಹಾದಿಯಲ್ಲಿ ಸಾಗುವ ಹಾಗೂ ಪಕ್ಷವನ್ನು ಬಲಾಢ್ಯಗೋಳಿಸುವ ನಿಟ್ಟಿನಲ್ಲಿ ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವದ ಅಭಿಯಾನಕ್ಕೆ ಉಸ್ತುವಾರಿ ನೀಡಿದ್ದಾರೆ ಅದನ್ನು ಸಮರ್ಪಕವಾಗಿ ನಿಭಾಯಿಸುವ ಕಾರ್ಯ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಶ್ರಮಿಸುವೆವು” ಎಂದರು.
ಈ ಸಮಯದಲ್ಲಿ ಮಾಲೂರು-ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶ್ರೀ ವಿಜಯನರಸಿಂಹ, ಮಧುಸೂದನ್, ಕೆಪಿಸಿಸಿ ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ, ಮುಖಂಡರು ಹಾಗೂ ಕಸಾಪ ಅಧ್ಯಕ್ಷರಾದ ಹನುಮಂತಪ್ಪ, ಬಾವನಹಳ್ಳಿ ಮುರಳಿ, ಪುರಸಭಾ ಸದಸ್ಯರಾದ ಮಂಜುನಾಥ್, ಜಾಕೀರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ತನ್ವೀರ್, ಹರೀಶ, ಶಬ್ಬೀರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.