ಮನಾಮ (ವಿಶ್ವ ಕನ್ನಡಿಗ ನ್ಯೂಸ್) : ಬಹ್ರೇನ್ ಸರಕಾರ ಘೋಷಿಸಿದ 10 ವರ್ಷಗಳ ಗೋಲ್ಡನ್ ವೀಸಾ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅನಿವಾಸಿ ಉದ್ಯಮಿ ಮತ್ತು ಲುಲು ಗ್ರೂಪ್ ಚೇರ್ಮೆನ್ ಎಂ.ಎ. ಯೂಸುಫ್ ಅಲಿ ಪಾತ್ರರಾದರು. ಇಂದು ಗುದಯಿಬಿಯ ಅರಮನೆಯಲ್ಲಿ ನಡೆದ ಸಭೆಯಲ್ಲಿ ಎಂ.ಎ. ಯೂಸುಫ್ ಅಲಿಗೆ ಮೊದಲ ಗೋಲ್ಡನ್ ವೀಸಾ ನೀಡಲು ನಿರ್ಧರಿಸಲಾಯಿತು.
ಈ ಗೌರವವನ್ನು ಸ್ವೀಕರಿಸುವುದು ನನ್ನ ಜೀವನದ ಹೆಮ್ಮೆಯ ಕ್ಷಣವಾಗಿದೆ ಎಂದು ಎಂ.ಎ. ಯೂಸುಫ್ ಅಲಿ ಹೇಳಿದರು ಮತ್ತು ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ, ಪ್ರಧಾನಿ ಮತ್ತು ಯುವರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಮತ್ತು ಬಹ್ರೇನ್ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕೃತಜ್ಞತೆ ಸಲ್ಲಿಸಿದರು.
ಕಳೆದ ಸೋಮವಾರ, ಬಹ್ರೇನ್ ಹೂಡಿಕೆ ಬೆಳವಣಿಗೆಯ ಜೊತೆಗೆ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಉದ್ದೇಶದಿಂದ ಗೋಲ್ಡನ್ ರೆಸಿಡೆನ್ಸಿ ವೀಸಾಗಳನ್ನು ಘೋಷಿಸಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.