ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : SSLC ಹಾಗೂ PUC ವಿಧ್ಯಾರ್ಥಿಗಳಲ್ಲಿ ಪರೀಕ್ಷೆ ಸಮೀಪಿಸುತ್ತಿರುವಾಗ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ SSF ಕಲ್ಲುಗುಂಡಿ ಯೂನಿಟ್ ಸಮಿತಿಯು ಕೋಚಿಂಗ್ ತರಬೇತಿಯನ್ನು ತೆಕ್ಕಿಲ್ ಮಾದರಿ ಶಾಲೆ ಗೂನಡ್ಕ ದಲ್ಲಿ ದಿನಾಂಕ 13-02-2022 ರಂದು ನಡೆಸಲಾಯಿತು.
ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬುದನ್ನು ವಿಧ್ಯಾರ್ಥಿಗಳಿಗೆ ತಿಳಿಸಲು HOW TO FACE EXAM? ಎಂಬ ಹೆಸರಿನಲ್ಲಿ ತಜ್ಞ ಅಧ್ಯಾಪಕರಿಂದ ಕೋಚಿಂಗ್ ತರಬೇತಿಯನ್ನು ನೀಡುವ ಮೂಲಕ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದೆ.
ತರಬೇತಿಯ ನೇತೃತ್ವವನ್ನು ವಹಿಸಿದ್ದ ತರಬೇತುದಾರರೂ, ಅಧ್ಯಾಪಕರೂ, ಎಸ್ಸೆಸ್ಸಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಗಳೂ ಆದ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ಯವರು ಉತ್ತಮ ತರಬೇತಿ ನಡೆಸಿದರು. ವಿಧ್ಯಾರ್ಥಿಗಳ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಿ ಪರೀಕ್ಷೆಯನ್ನು ಎದುರಿಸುವ ಸುಲಭ ವಿಧಾನಗಳನ್ನು ಮನಮುಟ್ಟುವಂತೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಸಿದ್ದೀಖ್ ಕಟ್ಟೆಕಾರ್ ಹಾಗೂ ತೆಕ್ಕಿಲ್ ಶಾಲೆಯ ಅಧ್ಯಾಪಕರೂ ಭಾಗವಹಿಸಿದ್ದರು. ಹಲವಾರು ವಿಧ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಇಜಾಝ್ ಗೂನಡ್ಕ ಸ್ವಾಗತಿಸಿ, ಎಸ್ಸೆಸ್ಸಫ್ ಕಲ್ಲುಗುಂಡಿ ಯೂನಿಟ್ ನ ವಿಸ್ಡಂ ಕಾರ್ಯದರ್ಶಿ ಜುನೈದ್ ಸಿ.ಎ ವಂದಿಸಿದರು, ಕಲ್ಲುಗುಂಡಿ ಯೂನಿಟ್ ಕ್ಯಾಂಪಸ್ ಕಾರ್ಯದರ್ಶಿ ರುನೈಝ್ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.