ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಮರ್ಕಜ್ ನಾಲೆಜ್ ಸಿಟಿ ವಿವಾದದ ಹಿಂದೆ ಕೆಲವು ಸ್ವಾರ್ಥ ಹಿತಾಶಕ್ತಿಗಳ ಕೈವಾಡ ಇದೆ ಎಂದು ಕಾಂತಪುರಂ ಎಪಿ ಅಬುಬಕ್ಕರ್ ಮುಸ್ಲಿಯಾರ್ ಹೇಳಿದರು.
ಈ ವ್ಯಕ್ತಿಗಳು ಯಾರು ಎಂದು ನನಗೆ ತಿಳಿದಿದ್ದು, ಅಗತ್ಯ ಬಿದ್ದರೆ ಬಹಿರಂಗಪಡಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಿರ್ಮಾಣಗಳಿಗೆ ಸಂಬಂಧಿಸಿದಂತೆ ಎತ್ತಲಾದ ಎಲ್ಲಾ ಆರೋಪಗಳು ಸುಳ್ಳು. ನಿರ್ಮಾಣಗಳನ್ನು ಎಲ್ಲಾ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ. ವಿವಾದ ಹುಟ್ಟು ಹಾಕುವವರ ಪರ ಯಾರೂ ಇಲ್ಲ, ಜಾತಿ ಮತ ಭೇದವಿಲ್ಲದೆ ಎಲ್ಲರೂ ವಿವಾದಕ್ಕೆ ವಿರೋಧವಾಗಿದ್ದಾರೆ. ರಾಜಕೀಯ ಅಥವಾ ಕೋಮು ವಿರೋಧವು ವಿವಾದದ ಹಿಂದೆ ಇಲ್ಲ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.