ಗಜಲ್ ಸತ್ತವರ ಸಂಖ್ಯೆ ಹೇಳುವುದಕ್ಕೆ ಹೊರಟಿದ್ದೇವೆ ಯುದ್ಧ ಬೇಡ ಇದ್ದವರ ಗೋರಿ ಕಟ್ಟುವುದಕ್ಕೆ ಸಿದ್ಧರಾಗಿದ್ದೇವೆ ಯುದ್ಧ ಬೇಡ
ಚಿಮ್ಮುವ ಕ್ಷಿಪಣಿಗೆ ಎದೆಹಾಲು ಸೀಳುವ ಗಮ್ಯ ಗೊತ್ತಿರುವುದಿಲ್ಲ ಹಾಲ್ದುಟಿಗಳ ಹೊಲೆದು ಮುಚ್ಚುವುದಕ್ಕೆ ಕಾಯುತ್ತಿದ್ದೇವೆ ಯುದ್ಧ ಬೇಡ
ಹರಿವ ನೆತ್ತರಿಗೆ ಯಾವ ಗಡಿಯಾದರೇನು ಸೀಮೆ ಬೇಕಿದೆ ಗೆದ್ದವರ ಝಂಡಾ ಹಾರಿಸುವುದಕ್ಕೆ ಹಸಿದಿದ್ದೇವೆ ಯುದ್ಧ ಬೇಡ
ಬಂದೂಕಿನ ಕೊಳವೆ ಅಳುವ ಬಿಕ್ಕಳಿಕೆ ನನಗೆ ಕೇಳಿಸುತ್ತಿದೆ ಉಟ್ಟವರ ಬಟ್ಟೆ ಬಿಳಿಯಾಗುವುದಕ್ಕೆ ಸಾಕ್ಷಿಯಾಗಿದ್ದೇವೆ ಯುದ್ಧ ಬೇಡ
ಸಾವು ನಿತ್ಯ ಸತ್ಯ ಬದುಕಿ ಬದುಕಿಸುವುದೇ ನಿಜ ಧರ್ಮ ಅಲ್ಲವೇ ಸಾವನ್ ಮುಂಬರುವ ಪ್ರಶ್ನೆ ಉತ್ತರಿಸುವುದಕ್ಕೆ ಬದ್ಧರಾಗಿದ್ದೇವೆ ಯುದ್ಧ ಬೇಡ
ಸಾವನ್ ಕೆ ಸಿಂಧನೂರು ಸಾವನ್ ಕೆ ಸಿಂಧನೂರು 9902858592
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.