ಅವರಿಗೋ ದಾಹ ತೀರದ ರಕ್ತದಾಹ ಎಳೆಮಕ್ಕಳನ್ನೂ ಬಿಡದೆ ರಕ್ತಹೀರಿ ಕುಡಿದು ಈಗ ನಾಲ್ಕುದಿನಗಳ ಕದನ ವಿರಾಮವಂತೆ ಪುನಃ ಯುದ್ಧ ಶುರುವಂತೆ ಇನ್ನೇನುಳಿದಿದೆ ಅಲ್ಲಿ ?
ಹುಡಿಹುಡಿಯಾದ ಕಟ್ಟಡ ಬೆಂದ ದೇಹಗಳ ರಾಶಿ ಆಸ್ಪತ್ರೆಯಿಲ್ಲದೆ ನರಳಾಡುವ ಗಾಯಾಳುಗಳು ತೊಟ್ಟು ನೀರಿಗಾಗಿ ಹಾತೊರೆಯುವ ಜೀವಗಳು ಮನೆ ಕುಟುಂಬವೆಲ್ಲವ ಕಳೆದು ಗೊತ್ತುಗುರಿಯಿಲ್ಲದೆ ತಾಯ್ನಾಡನ್ನು ತೊರೆಯುತ್ತಿರುವ ಅಮಾಯಕ ಜನರು
ಇಷ್ಟೇ ಅಲ್ಲವೆ ಅಲ್ಲಿ ಅಳಿದಿರುವ ಕುರುಹುಗಳು.. ಅವರಲ್ಲೋ ಸಶ್ರ್ತಾಸ್ತ್ರವಿದೆ ಅತ್ಯಾಧುನಿಕ ಆಯುಧವಿದೆ ದೊಡ್ಡವರ ಬೆಂಬಲವಿದೆ ಅಮಾಯಕನಂತೆ ಬಿಂಬಿಸುವ ಮಾಧ್ಯಮವಿದೆ ಜಯ ಅವರದೇ ಎಂಬ ಖಾತ್ರಿಯಿದೆ
ಪ್ಯಾಲಸ್ತೀನಿಯರ ಬಳಿ ಇದಾವುದೂ ಇಲ್ಲ ಅವರಲ್ಲಿ ಅವರ ನಾಡಿನ ಬಗ್ಗೆ ಅಪಾರ ಪ್ರೇಮವಿದೆ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯವಿದೆ ಧೃಡವಾದ ಈಮಾನಿದೆ ಗಾಝಾ ಮರುಸ್ಥಾಪಿಸುವುವೆಂಬ ವಿಶ್ವಾಸದವಿದೆ ಒಂದು ದಿನ ಗೆದ್ದೇ ಗೆಲ್ಲುವೆವೆಂಬ ನಂಬಿಕೆಯಿದೆ
ಅದುವೇ ನಮ್ಮೆಲ್ಲರ ಪ್ರಾರ್ಥನೆ ಕೂಡ ಬಾಂಬು ಬಂದೂಕುಗಳ ಸದ್ದಿಲ್ಲದೆ ತಮ್ಮ ನೆಲದಲ್ಲಿ ಸ್ವತಂತ್ರವಾಗಿ ನಡೆದಾಡಿ ನಲಿದಾಡುವಂತಾಗಬೇಕು ಗಾಝಾದ ಮಕ್ಕಳು ಆ ಕ್ಷಣವನ್ನು ನೋಡಲು ಕಾತರದಿಂದ ಕಾಯುತ್ತಿದೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಕಣ್ಣುಗಳು…
✍️ ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.