(www.vknews. in)
ಇರಬೇಕಿತ್ತು ನೀ ಹತ್ತಿರ ನಾ ಕಣ್ಣೀರು ಜಾರಿಸುವಾಗ ನೊಂದು ನಿಟ್ಟುಸಿರು ಬಿಡುವಾಗ
ಇರಬೇಕಿತ್ತು ನೀ ಹತ್ತಿರ ಜನರು ಗಹ -ಗಹಿಸುವಾಗ ಸಮಾಜ ಕುಕ್ಕಿ ಹೆಕ್ಕುವಾಗ
ಇರಬೇಕಿತ್ತು ನೀ ಹತ್ತಿರ ನಾ ಕಾದು ಮೌನದಿ ಕುಳಿತಾಗ ವಿವಿಧ ಕೈಗಳು ನನ್ನ ಸೋಕುವಾಗ
ಇರಬೇಕಿತ್ತು ನೀ ಹತ್ತಿರ ಕ್ಷಣ ಕ್ಷಣಕ್ಕೂ ಮಾರಾಟವಾದಾಗ ನಿಷ್ಕರುಣಿಯ ಆಸೆ ತೀರಿಸುವಾಗ
ಇರಬೇಕಿತ್ತು ನೀ ಹತ್ತಿರ ನಾ ಕಲ್ಪನೆಯಲ್ಲಿ ತೇಲುವಾಗ ನಿನ್ನದೆಯ ಬಾಂದಳದಿ ಮೊಗವಿರಿಸಿದಾಗ
ಇರಬೇಕಿತ್ತು ನೀ ಹತ್ತಿರ ನನ್ನ ಲಲಾಟದ ಲಿಪಿಯಾಗ ಬಾಳ ಬಂಡಿಯ ಕೀಲಿನಾಂಗ
ಇರಬೇಕಿತ್ತು ನೀ ಹತ್ತಿರ ನಾ ನಿನ್ನ ಮಡಿಲಲ್ಲಿ ಸಾಯುವಾಗ ಮುತ್ತೈದೆಯಾಗಿ ಹೋಗುವಾಗ….
ಅಶ್ವಿನಿ ಅಂಗಡಿ.. ಬದಾಮಿ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.