ಹಬ್ಬ ಬಂದಿದೆ ಯುಗಾದಿ ಹಬ್ಬ ಬಂದಿದೆ ಮತ್ತೆ ಬಂದಿದೆ ಯುಗಾದಿ ಹೊಸತನಕೆ ಹೊಸದಾಗಿ ಬಂದು ನಿಂತಿದೆ ಬಾಗಿಲಿಗೆ… ಮತ್ತೇ ಬಂದಿದೆ
ಉರಿವ ಸೂರ್ಯ ಕಾದ ನೆಲ ಬಿಸಿಲ ಝಳ ಬೆವರ ನೀರ ಬೇರಿ ಗಿಳಿಸಿ. ಗರಿಕೆ ಹಸಿರಾಗಿ ಜೀವ ಮಿಡಿತವಾಗಿ, ನಗು ನಗುತಾ ಬಂದಿದೆ
ಹೊಂಗೆಯ ತಂಪು ಮಾವಿನ ಕಂಪು ನಳ ನಳಿಸುವ ಹಸಿರ ಸೊಂಪು. ವಿಸ್ಮಯವಿದು ಕಣೋ ಅಣ್ಣಾ ರಣಬಿಸಿಲ ಮಡಿಲಲಿ ಚಿಗುರು. ಅವ್ವ ಉಟ್ಟ ಕಡು ಹಸಿರ ಸೀರೆಯಂತೆ
ಯಾವುದೊ ಹೊಲದ ಮಾವು ಮನೆ ಬಾಗಿಲ ತೋರಣವಾಗಿದೆ, ಬೇವು ಬೆಲ್ಲ ದೇವರ ಮನೆಯ ಎಡೆಯಾಗಿದೆ. ತಿಂದು ಪ್ರಸಾದವೆನಿಸಿದೆ..ಮತ್ತೇ ಬಂದಿದೆ.
ಯುಗಾದಿ ಇಲ್ಲದ ಊರಿದೆಯೇನು ? ನನ್ನ ನೆಲದಲಿ, ಒಬ್ಬಟ್ಟ ಹೂರಣ ಬೇಯದ ಒಲೆಯಿದೆಯೇನು ? ಅಚ್ಚ ಅಪ್ಪಟ ದೇಸಿ ಹಬ್ಬ ಕಣೋ ನಮ್ಮ ಯುಗಾದಿ.
ಮೊದಲ ಹಬ್ಬ ಕಣೋ ಇದು ಈ ನೆಲಕೆ ನನ್ನ ಪರಂಪರೆಗೆ ಹೊಸ ಹೆಸರು ಹೊಸ ಹೆಜ್ಜೆ ಉಸಿರು ನನಗೆ ನಿನಗೆ ಹೊಸ ಭಾವಕೆ ಕೈ ಬೀಸಿ ಕರೆದಂತೆ…ಮತ್ತೇ ಬಂದಿದೆ
ಸಂವತ್ಸರಗಳ ಪೋಣಿಸಿಕೊಂಡಿದೆ.ಋತು ಮಾನಗಳ ಅಂಟಿಸಿಕೊಂಡಿದೆ. ಮಳೆ ಬೆಳೆಯ ತುಂಬಿಕೊಂಡಿದೆ. ಆಸೆ ಇಟ್ಟ ಕಣ್ಣಿಗೆ ಭರವಸೆಯ ಹೆಜ್ಜೆ ಇಟ್ಟು ಬಂದಿದೆ… ಬಂದಿದೆ
ನಿನ್ನೆ ಅಳಿದು ಇಂದು ಹೊಸದು ದಿನ ಹೊಸದಿದೆ, ಸೂರ್ಯನ ಹೆಜ್ಜೆ. ಹೊಸದಿದೆ ಚಂದ್ರ ಬೆಳಕು ಗುರುತಿಸು ನೀ ಅದರೊಳಗೆ ನವ ಯುಗಾದಿಯ ಬೆಳಕು ಕಾಣುವುದು ನಿನಗೆ
ಹೊಸ ಯುಗಾದಿಗೆ ‘ಹೊತ್ತಿದೆ ಒಳಗೆ ಇಳೆಯ ಒಳತಿಗೆ ಪ್ರಕೃತಿಯ ಗರ್ಭ ಲೋಕದ ಉಸಿರಿಗೆ, ಎಲ್ಲಾ ಬದಲಾದರು ನೀ ಬದಲಾಗ ಲೊಲ್ಲೆ. ಹೇಗಾದಿತು ನವ ಯುಗಾದಿ…. ಬಂದಿದೆ
ಕೃಷ್ಣ ತಿಪ್ಪೂರು ( ವಿಶ್ವಾವಸು ನಾಮ ಸಂವತ್ಸರ ಯುಗಾದಿ ಹಬ್ಬದ ಶುಭಾಶಯಗಳೊಡನೆ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.