(www.vknews.in)
ಕಾಣಲು ಮಂದಹಾಸ ತೋರಿದರು ಧೀರ ಸಾಹಸ ಕಾಣದಾಯಿತು ಪಾಲೆಗಾರರ ಇತಿಹಾಸ ಅವರೇ ಜಗದಿ ಅಮರವಾಸ
ನಿದ್ದೆ ಇಲ್ಲ ಆಂಗ್ಲರಿಗೆ ನಿದ್ದೆ ಇಲ್ಲ ಹೊಸತು ಶಾಹಿಗಳಿಗೆ ನಿದ್ದೆ ಇಲ್ಲ ಪಾಟೀಲರಿಗೆ ಕೊನೆಗೂ ಜಯ ಮೈಸೂರ ಹುಲಿಗೆ
ಧರ್ಮವಿಲ್ಲ ಆಸ್ಥಾನದಲ್ಲಿ ಧಾರ್ಮಿಕತೆ ಇಲ್ಲ ನೀತಿಯಲ್ಲಿ ಇನ್ನೆಲ್ಲಿಂದ ಬಂತು ಮತಾಂದತೆ ಇಲ್ಲಿ ಧೀರರಿಗೆ ಇವೆಲ್ಲ ಸವಾಲಾಗಿಯಲ್ಲಿ
ನಿರಾಶ್ರಿತರಿಗೆ ಆಶ್ರಯದಾತ ಭ್ರಷ್ಟರಿಗೆ ಸಿಂಹ ಸ್ವಪ್ನವೀತ ಕರುಳ ಬಳ್ಳಿಯ ಆಡವಿಟ್ಟಾತ ಮುನ್ನಡೆತ ದೇಶಪ್ರೇಮದತ್ತ
ಕಳೆದರು ಅರ್ಧ ಜನ್ಮ ಯುದ್ಧ ಭೂಮಿಯಲ್ಲಿ ಇರಲಿಲ್ಲ ಸುಖ ಜೀವನದಲ್ಲಿ ಇತ್ತು ಸಿಂಹಾಸನ ಕತ್ತಲ ಕೋಣೆಯಲ್ಲಿ ದೇಶಪ್ರೇಮಿಯ ದೀರ್ಘ ಯೋಜನೆಯಲಿ
ಶತ್ರುಗಳು ಕಂಡರವರ ದೇಶ ಪ್ರೇಮವನ್ನ ಚಿತ್ರಿಸದರವರನ್ನು ದೇಶದ್ರೋಹಿಯನ್ನ ಅರಿತರು ತಿರುವಳಿಕೆ ಉಲ್ಲವರು ಯಾವುದು ನೈಜವೆನ್ನುವುದನ್ನ
ಕಂಡಗನಸು ಸ್ವತಂತ್ರ ಭಾರತ ಕರುಳ ಬಳ್ಳಿಯೂ ಕನಸಿನ ಭಾರತ ಪೂರ್ಣಯ್ಯ ಸಾಧಿಕರ ವಂಚನೆ ನಿಮಿತ್ತ ನಷ್ಟವೇ ಧೀರ ಹುಲಿಯ ಅಂತ್ಯ ..!
— ಸಿರಾಜುದ್ದೀನ್ ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.