ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್) : ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕಲ್ಲಡ್ಕ ದ ಅನಿವಾಸಿ ಭಾರತೀಯರಿಗಾಗಿ ಕಲ್ಲಡ್ಕ ಅಬ್ರಾಡ್ ಫೋರಮ್ (ಕಾಫ್) ಹಮ್ಮಿಕೊಂಡಿರುವ ಸ್ನೇಹ ಸಮ್ಮಿಲನ ಕಾರ್ಯಕ್ರಮವು ನವೆಂಬರ್ 22 ರಂದು ದಮ್ಮಾಮ್ ನ ಇಸ್ತಿರಾದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸಮ್ಮಿಲನದ ಭಾಗವಾಗಿ ಸಭಾ ಕಾರ್ಯಕ್ರಮ ಸೇರಿದಂತೆ ಸಾಧಕರಿಗೆ ಸನ್ಮಾನ, ವಿವಿಧ ಮನೋರಂಜನಾ ಕ್ರೀಡೆಗಳು, ಸ್ಕಿಟ್, ಹಾಡು, ಡಾಕ್ಯುಮೆಂಟರಿ ಪ್ರದರ್ಶನ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳು, ದುಬೈ, ಬಹರೈನ್, ಭಾರತದಿಂದ ಹಲವು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಲ್ಲಡ್ಕ ಅಬ್ರಾಡ್ ಫೋರಮ್ ಗಲ್ಫ್ ರಾಷ್ಟ್ರಗಳಲ್ಲಿರುವ ಕಲ್ಲಡ್ಕದ ಅನಿವಾಸಿಗಳ ನೆರವಿಗಾಗಿ ಸ್ಥಾಪಿಸಲಾದ ವೇದಿಕೆಯಾಗಿದ್ದು, ಉದ್ಯೋಗ ಅರಸಿ ತವರಿನಿಂದ ಬರುವ ಕಲ್ಲಡ್ಕ ನಿವಾಸಿಗಳಿಗೆ ಆಹಾರ, ವಸತಿ ಮತ್ತು ಇತರ ಸೌಕರ್ಯಗಳನ್ನು ಕಲ್ಪಿಸುವ ಮತ್ತು ಉದ್ಯೋಗ ಮಾಹಿತಿ ಹಾಗು ಇತರ ಮಾರ್ಗದರ್ಶನಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ.
ವರದಿ:ಅಬ್ದುಲ್ ಜಾಬಿರ್
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.