ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ; ಪೋಷಕರ ಆರೋಪ..
ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನವರಂಗ್ ಸರ್ಕಲ್ನ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿ ವೈದ್ಯರ ನಿರ್ಲಕ್ಷ್ಯದಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆಗಳಿಲ್ಲ, ಪೋಷಕರ ಒಪ್ಪಿಗೆ ಇಲ್ಲದೆ ಫ್ಯಾಟ್ ಸರ್ಜರಿ ನಡೆಸಲಾಗಿದೆ ಎಂದು ಚೇತನಾ ಅವರ ಅಪ್ಪ ವರದರಾಜ್ ಆರೋಪ ಮಾಡಿದ್ದಾರೆ. ಚೇತನಾ ಹಲವು ಧಾರಾವಾಹಿ, ಸಿನಿಮಾದಲ್ಲಿ ಅಭಿನಯಿಸಿದ್ದರು.
ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕರು, ಡಾ.ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಮಾತನಾಡುವುದಾಗಿ ವೈದ್ಯರು ಹೇಳುತ್ತಾರೆ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.