ಕನ್ನಡಿಗರಿಗೆ ಹಲವಾರು ವಾರ್ತಾ ಮಾಧ್ಯಮಗಳು ಇದ್ದರೂ ಸಮಯಬಂಧಿತವಾಗಿ ಕೊಟ್ಟ ನ್ಯೂಸ್ ನಿಖರವಾಗಿ ಪ್ರಸಾರವಾಗುವುದು ಕೆಲವೊಂದು ಮಾತ್ರ. ಆದರೆ ವಿಕೆ ನ್ಯೂಸ್ ನ ಮೂಲಕ ಬರುತ್ತಿರುವ ವಾರ್ತೆಗಳನ್ನು ಗಮನಿಸುವಾಗ ಹಳ್ಳಿಗಳಲ್ಲಿರುವ ಸಾಮಾನ್ಯ ಜನತೆಯ ನ್ಯೂಸ್ ನಿಂದ ಹಿಡಿದು ಅಂತಾರಾಷ್ಟ್ರೀಯ ವಾರ್ತೆಗಳ ಸಹಿತ ಹಲವು ವಾರ್ತೆಗಳು ವ್ಯಕ್ತಿ, ಜಾತಿ, ಪಕ್ಷ, ಪಂಗಡ, ಸಂಘಟನೆಯ ವ್ಯತ್ಯಾಸವಿಲ್ಲದೆ ನಿರಂತರವಾಗಿ ಪ್ರಸಾರವಾಗುತ್ತಿರುವುದು ಎಲ್ಲರ ವಿಶ್ವಾಸಕ್ಕೆ ಕಾರಣವಾಗಿದೆ.
ಹನ್ನೆರಡು ವರ್ಷಗಳ ನಿರಂತರ ವಾರ್ತಾಪ್ರಸಾರದಲ್ಲಿ ಯಾವುದೇ ರೀತಿಯ ಅಸಂಬದ್ಧವಾದ ಅಥವಾ ಸೌಹಾರ್ದ ಕದಡುವ, ಅಸಹಿಷ್ಣುತೆಯ ಯಾವುದೇ ವಾರ್ತೆ ಗಳು ಬರದಿರುವ ಕಾರಣದಿಂದಲೇ ನಾಡಿನ ನಲ್ಮೆಯನ್ನು ಬಯಸುವ ಎಲ್ಲಾ ವಿಭಾಗಗಳ ನೆಚ್ಚಿನ ಮಾಧ್ಯಮವಾಗಿ ವಿಕೆ ನ್ಯೂಸ್ ಮಾರ್ಪಾಟುಗೊಂಡಿದೆ.
ತಮ್ಮ ಈ ಸೇವೆಗೆ ಹಾಗೂ ತಮ್ಮ ಈ 12 ನೇ ಸಂಭ್ರಮಾಚರಣೆಗೆ ನಾನು ಪ್ರತಿನಿಧಿಸುವ ಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ಸರ್ವ ವಿಧದ ಶುಭಾಶಯವನ್ನು ತಿಳಿಸುವುದರೊಂದಿಗೆ ಈ ಮಾಧ್ಯಮವು ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಆಶಿಸುತ್ತಿದ್ದೇನೆ.
– ಎ.ಎಂ.ಫೈಝಲ್ ಝುಹ್ರಿ ಅಲ್-ಫುರ್ಖಾನಿ, ಕಲ್ಲುಗುಂಡಿ (ಸದಸ್ಯರು, ಎಸ್ಸೆಸ್ಸಫ್ ಕರ್ನಾಟಕ ರಾಜ್ಯ ಸಮಿತಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.