(www.vknews.in) : KCF ದುಬೈ ನೋರ್ತ್ ಝೋನ್ ವತಿಯಿಂದ ‘ಥಿಂಕ್ ಅಪ್ ಲೀಡರ್ಸ್ ಮೀಟ್ ಮತ್ತು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ರವರಿಗೆ ಸನ್ಮಾನ ಕಾರ್ಯಕ್ರಮ ಜೂನ್ 12 ಆದಿತ್ಯವಾರ ಮಧ್ಯಾಹ್ನ ತಾಜುಲ್ ಫುಕಹಾಅ ಬೇಕಲ್ ಉಸ್ತಾದ್ KCF ದುಬೈ ನೋರ್ತ್ ಝೋನ್ ಸೆಂಟರ್ ನೈಫ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ವಹಿಸಿದರು. ಉದ್ಘಾಟನೆಯನ್ನು ಇಹ್ಸಾನ್ ಕರ್ನಾಟಕ ಅಧ್ಯಕ್ಷರು ಮತ್ತು ಸುನ್ನಿ ಯುವಜನ ಸಂಘ ಕರ್ನಾಟಕ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಹಫೀಳ್ ಸಹದಿ ಕೊಳಕೇರಿ ನೆರವೇರಿಸಿದರು.
ಕೆಸಿಎಫ್ ಅಂತಾರಾಷ್ಟೀಯ ಪ್ರ. ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ರವರವರು ತರಗತಿ ನಡೆಸಿದರು. ಕೆಸಿಎಫ್ ದುಬೈ ನಾರ್ತ್ ಝೋನ್ ನಾಯಕರ ಸಮ್ಮುಖದಲ್ಲಿ ಕಮರುದ್ದೀನ್ ಗೂಡಿನಬಳಿರವರಿಗೆ ಮೊಮೆಂಟೊ ನೀಡಿ ಗೌರವಿಸಲಾಯಿತು.
ಕೆಸಿಎಫ್ ಯುಎಇ ನಾಯಕ ಇಕ್ಬಾಲ್ ಕಾಜೂರು, ನಾರ್ತ್ ಝೋನ್ ನಾಯಕರುಗಳಾದ ಇಬ್ರಾಹಿಂ ಮದನಿ ಹೊರ್ಲ್ಯಾನ್ಜ್, ಅಬ್ದುಲ್ ಅಝೀಝ್ ಲೆತೀಫಿ, ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ, ಲೆತೀಫ್ ಪಾತೂರು, ರಿಯಾಝ್ ಕೊಂಡೆಂಗೇರಿ, ಅಬ್ಬಾಸ್ ಮಂಜನಾಡಿ ರವರು ಮತ್ತು ಸೆಕ್ಟರ್ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್ ಉಳ್ಳಾಲರವರು ಸ್ವಾಗತಿಸಿದರೆ, ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ರವರು ಧನ್ಯವಾದವಿತ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.