(www.vknews.in) : ನಾಯಿ ಇದೆ ಎಚ್ಚರಿಕೆ ! ಸಧ್ಯ ಗಾಂಧಿನಗರದಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಸದ್ದು ಮಾಡುತ್ತಿರುವ ವಿಶೇಷ ಮನರಂಜನೆಯ ಚಿತ್ರ. ಟೈಟಲ್ ಜೊತೆಗೆ ಚಿತ್ರದ ಕಥೆ ಕೂಡ ವಿಭಿನ್ನ ಎನ್ನುವುದು ನಿರ್ದೇಶಕ ಕಲಿಗೌಡರ ಮಾತು , ಈ ಹಿಂದೆ ” ತನಿಖೆ ” ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿರುವ ಕಲಿಗೌಡ ಅವರು ” ನಾಯಿ ಇದೆ ಎಚ್ಚರಿಕೆ !! ” ಚಿತ್ರಕ್ಕೆ ಮತ್ತೆ ಕ್ಯಾಪ್ ತೊಟ್ಟಿದ್ದಾರೆ.
ಹಾಸ್ಯದ ಜೊತೆಗೆ ರೋಮಾಂಚಕಾರಿ ಕಥಾ ಹಂದರವಿರುವ ಚಿತ್ರದಲ್ಲಿ ಮಂಗಳೂರು ದಿನೇಶ್ , ಬಾಲ ರಾಜವಾಡಿ , ನಾಗೇಂದ್ರ ಅರಸು ಸೇರಿದಂತೆ ಮುಖ್ಯ ಪಾತ್ರದಲ್ಲಿ ಲೀಲಾ ಮೋಹನ್ ಪಿವಿಆರ್ ಮತ್ತು ಪ್ರಮುಖ ಪಾತ್ರದಲ್ಲಿ ಪ್ರಬಿಕ್ ಮೊಗವೀರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ತಾರಾ ದಿವ್ಯ , ಚಂದನ , ಮಾನಸ , ಶ್ರೀನಿ , ಸುನೀಲ್ , ರಿಷಿ , ಯುವ ನಟಿಸಿದ್ದಾರೆ.
ಚಿತ್ರದಲ್ಲಿ ರೂಬಿ ಎನ್ನುವ ನಾಯಿ ನಟಿಸದ್ದು ಚಿತ್ರದ ಕುತೂಹಲವನ್ನು ಇಮ್ಮಡಿಗೊಳಿಸಿದೆ,ಚಿತ್ರಕ್ಕೆ ಅಜಿತ್ ಕುಮಾರ್ ಛಾಯಾಗ್ರಹಣ , ಕ್ರಿಷ್ಟಪರ್ ಜಾಯ್ಸನ್ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲಿ ಬಿಡುಗಡೆಯಾಗಲು ಚಿತ್ರ ತಂಡ ತಯಾರಿ ನಡೆಸುತ್ತಿದೆ.
ಪ್ರಬಿಕ್ ಮೊಗವೀರ್ ಮತ್ತು ಲಾವಣ್ಯ ಗಾಧೆ ಚಿತ್ರದ ನಿರ್ಮಾಪಕರಾಗಿದ್ದು ಚಿತ್ರಕ್ಕೆ ಭಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ದೊಡ್ಡ ಬೇಡಿಕೆ ಇದೆ ಎನ್ನುವುದು ಗಾಂಧಿ ನಗರದಲ್ಲಿ ಅರಿದಾಡುತ್ತಿರುವ ಮಾಹಿತಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.