ಕುವೈತ್ (ವಿಶ್ವ ಕನ್ನಡಿಗ ನ್ಯೂಸ್) : ಘನತೆವೆತ್ತ ಶೇಖ್ ಮೊಹಮ್ಮದ್ ಅಲ್ ಸಬಾಹ್ ಅಲ್ ಸಲೀಂ ಅವರನ್ನು ಕುವೈತ್ ನ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಬರಲಿದೆ ಎಂದು ಸ್ಥಳೀಯ ದೈನಿಕ ವರದಿ ಮಾಡಿದೆ. ಶೇಖ್ ಸಬಾಹ್ ಅಲ್ ಖಾಲಿದ್ ಅಲ್-ಸಬಾಹ್ ಬದಲಿಗೆ ಘನತೆವೆತ್ತ ಶೇಖ್ ಮೊಹಮ್ಮದ್ ಅಲ್ ಸಬಾಹ್ ಅಲ್-ಸಲೀಂ ಅವರನ್ನು ನೇಮಿಸಲಾಗಿದೆ.
2003 ರಿಂದ 2011 ರವರೆಗೆ ಶೇಖ್ ಮೊಹಮ್ಮದ್ ಕುವೈತ್ ನ ವಿದೇಶಾಂಗ ಸಚಿವರಾಗಿ ಮತ್ತು ಮೊದಲ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಆಧುನಿಕ ಕುವೈತ್ ನ ಎರಡನೇ ಆಮಿರ್ ಶೇಖ್ ಸಬಾಹ್ ಅಲ್ ಸಲೀಂ ಅವರ ಮಗ. ಅವರು ಅಕ್ಟೋಬರ್ 10, 1955 ರಂದು ಕುವೈತ್ ನಗರದಲ್ಲಿ ಜನಿಸಿದರು. ಅವರು 1993 ರಿಂದ 2003 ರವರೆಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕುವೈತ್ ನ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.