ತಂದೆಯಿಲ್ಲದೇ ತಾಯಿಯ ಆಸರೆಯಲ್ಲಿ ಬಾಳ ಬೇಕಾದ ಜೀವವೊಂದು ಪ್ರಾಣ ಕಳೆದುಕೊಂಡಿದೆ..
ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಿಡಿಗೇಡಿ ಯುವಕರಿಂದ ಅನ್ಯಾಯವಾಗಿ ಶಹಿದಾದ ಮಸೂದ್ ಎಂಬ ಅಮಾಯಕ ಯುವಕನ ಮರಣವಾರ್ತೆಯನ್ನು ವಿಷಯವಾಗಿ ತೆಗೆದುಕೊಂಡು ಶಾಪದ ವಿಷಯದಲ್ಲಿ ರಾಮಾಯಣದಲ್ಲಿ ಉಲ್ಲೇಖಿಸಿರುವ ಎರಡು ಪಕ್ಷಿಗಳ ಕುರಿತು ಸಂಸ್ಕೃತದಲ್ಲಿರುವ ಶ್ಲೋಕವನ್ನು ಪಠಿಸಿ ಅದರ ವಿವರಣೆಯನ್ನು ಸಂಪ್ಯ ಖತೀಬರಾದ ಅಲ್ ಹಾಜಿ ಅಬ್ದುಲ್ ಹಮೀದ್ ದಾರಿಮಿ ಅವರು ಜುಮಾಅ ಭಾಷಣದಲ್ಲಿ ನೀಡಿದರು.
ಒಂದು ಕಾಡಿನಲ್ಲಿ ಎರಡು ಪಕ್ಷಿಗಳಿದ್ದವಂತೆ. ಒಂದು ಗಂಡು ಇನ್ನೊಂದು ಹೆಣ್ಣು ಪಕ್ಷಿ. ಅವರು ಪರಸ್ಪರ ಪ್ರಣಯಿಸುತ್ತಿದ್ದವಂತೆ. ಒಂದು ದಿನ ಬೇಟೆಗಾರನೊಬ್ಬ ಒಂದು ಪಕ್ಷಿಯನ್ನು ಬೇಟೆಯಾಡುತ್ತಾನೆ. ಆಗ ಹೆಣ್ಣು ಪಕ್ಷಿಯು ತನ್ನ ಪ್ರಿಯತಮನ ಅಗಲುವಿಕೆಯ ದುಃಖವನ್ನು ತಾಳಲಾರದೇ ಕಣ್ಣೀರು ಹಾಕಿತಂತೆ. ಅದರರ್ಥ ಹೆಣ್ಣು ಪಕ್ಷಿಗೆ ಆದ ನೋವು,ದುಃಖವು ಶಾಫದ ರೂಪದಲ್ಲಿ ಬೇಟೆಗಾರನಿಗೆ ತಟ್ಟಲಿದೆ ಎಂಬುವುದನ್ನು ರಾಮಾಯಣದ ಒಂದು ಶ್ಲೋಕವೇ ಹೇಳುವಾಗ ಹಿಂದೂ ಧರ್ಮ ಗ್ರಂಥದಲ್ಲಿರುವ ದಯೆ, ಕರುಣೆ, ಮಾನವೀಯತೆಯ ಪಾಠವನ್ನು ಹೇಳಿಕೊಡುವ ಬದಲು ಯುವ ಪೀಳಿಗೆಗೆ ಖಡ್ಗ ನೀಡಿ ಹಿಂಸೆ, ಕೊಲೆ, ದೌರ್ಜನ್ಯದ ಪಾಠ ಹೇಳಿಕೊಟ್ಟು ಸಂಘಟನೆಗಳು ಜೀವ ತೆಗೆಯಲು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಸಮಾಜದ ದೊಡ್ಡ ದುರಂತವೆಂದರು.
ಮಾತು ಮುಂದುವರೆಸಿದ ಖತೀಬರು, ತಂದೆಯಿಲ್ಲದೇ ತಾಯಿಯ ಆಸರೆಯಲ್ಲಿ ಬೆಳೆದು ಬಾಳ ಬೇಕಾದ ಜೀವವೊಂದು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿರುವುದನ್ನು ಸಹಿಸಲಾಗದು, ಆ ತಾಯಿಯ ಕಣ್ಣಿನಿಂದ ಭೂಮಿಗೆ ಬಿದ್ದ ಪ್ರತಿಯೊಂದು ಕಣ್ಣೀರ ಹನಿಯೂ ಹಿಂಸಾತ್ಮಕವಾಗಿ ಕೊಂದು ಹಾಕಿದವರಿಗೆ ಶಾಫವಾಗಿ ಪರಿಣಮಿಸುವ ಕಾಲ ದೂರವಿಲ್ಲವೆಂದರು. ಅಲ್ಲದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾ ಆಗುವವರೆಗೂ ನಾವೆಲ್ಲರೂ ಸರಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕೆಂದು ಅವರು ಆಗ್ರಹಿಸಿದರು.
ಶಹೀದ್ ಮಸೂದ್ ರವರ ಅವರ ಕುಟುಂಬಕ್ಕೆ ಅಗಲುವಿಕೆಯ ನೋವನ್ನು ಸಹಿಸಲು ಹಾಗೂ ಅವರ ಬರ್ಝಕೀ ಜೀವನದ ಉದ್ದೀಪ್ತತೆಗಾಗಿ ವಿಶೇಷವಾಗಿ ಪ್ರಾರ್ಥಿಸಿ, ಅವರು ತಮ್ಮ ಜುಮಾಅ ಭಾಷಣವನ್ನು ಮುಕ್ತಾಯಗೊಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.