ಬೆಳ್ತಂಗಡಿ (www.vknews.in) ; ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ಬೆಳ್ತಂಗಡಿ ಇದರ ವತಿಯಿಂದ 3 ಜೋಡಿ ಉಚಿತ ಸಾಮೂಹಿಕ ವಿವಾಹ ಆಗಸ್ಟ್ 21 ರವಿವಾರ ಬೆಳಿಗ್ಗೆ 10 ಗಂಟೆಗೆ ನೂರುಲ್ ಹುದಾ ಜುಮಾ ಮಸ್ಜಿದ್ ಮದ್ದಡ್ಕ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಬ್ದುಲ್ ಬಶೀರ್ ಆಲಂದಿಲ ವಹಿಸಲಿದ್ದು ಅಸೈಯದ್ ಝೈನುಲು ಅಬಿದೀನ್ ಜಮಾಲುಲೈಲಿ ತಂಙಲ್ ದುವಾ ನೆರವೇರಿಸುವರು. ಹಸನ್ ಮುಬಾರಕ್ ಸಖಾಫಿ ಉದ್ಘಾಟಿಸಲಿದ್ದು. ನಿಖಾಹ್ ನೇತೃತ್ವವನ್ನು ಅಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಲ್ ಉಜಿರೆ ವಹಿಸುವರು. ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಬಾಷಣ ಮಾಡುವರು. ಹಾಜಿ ಎನ್ ಎಸ್ ಉಮರ್ ಮಾಸ್ಟರ್ ಕಾರ್ಯಕ್ರಮ ನಿರೂಪಣೆ ಮಾಡಲಿರುವರು.
ಕಾರ್ಯಕ್ರಮದಲ್ಲಿ ಹಲವು ಉಲಮಾ ಸಾದಾತುಗಳು ಉಮರಾ ನೇತಾರರು ಇನ್ನಿತರ ಗಣ್ಯರು ಭಾಗವಹಿಸಲಿರುವರು ಎಂದು ಮೆರೇಜ್ ಸಮಿತಿ ಚೆಯರ್ಮೆನ್ ಅಬ್ಬೋನು ಮದ್ದಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.