ಕೋಟೆಕಾರ್ ಅಜ್ಜಿನಡ್ಕ (www.vknews.in) ; ಅಂದು ದೇಶಕ್ಕೆ ರಕ್ತ ಕೊಟ್ಟರು ಇಂದು ರೋಗಿಗಳಿಗೆ ರಕ್ತ ನೀಡಿ. ಅಹ್ಮದ್ ಅಜ್ಜಿನಡ್ಜ ದೇಶದ ಭವ್ಯ ಪರಂಪರೆಯ ಸುಂದರವಾದ ನಮ್ಮ ಬದುಕಿಗೆ ಅಂದು ಬಲಿದಾನವಾಗಿ ವೀರಮರಣ ಹೊಂದಿದಲ್ಲಿ ಇಂದು ರೋಗಿಗಳ ರಕ್ಷಣೆಗೆ ರಕ್ತದಾನ ಮಾಡಿ ಸುಂದರ ಭಾರತ ನಿರ್ಮಾಣ ಮಾಡಿರಿ ಎಂದು ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಹೇಳಿದರು.
ಅವರು ಅಜ್ಜಿನಡ್ಕ ಹಳೇ ವಿದ್ಯಾರ್ಥಿ ಸಂಘ,ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಇವರ ಜಂಟಿ ಆಶ್ರಯ ದಲ್ಲಿ ಕಣಚೂರು ಆಸ್ಪತ್ರೆ ದೇರಳಕಟ್ಟೆ,ಇದರ ಸಹಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿನಡ್ಕ ಇದರ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸ್ಜಿದ್ ಅದ್ಯಕ್ಷರಾದ ಹಾಜಿ,ಸುಲೈಮಾನ್ ವಹಿಸಿದರು. ವೇದಿಕೆಯಲ್ಲಿ ಬಾತೀಷ್ ಅಜ್ಜಿನಡ್ಕ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಅಜ್ಜಿನಡ್ಕ. ಇಸ್ಮಾಯೀಲ್ ಸಿ ಎಚ್ ಸದಸ್ಯರು ಗಲ್ಪ್ ಪ್ರೆಂಡ್ಸ್ ಅಜ್ಜಿನಡ್ಕ ಚಾರಿಟೇಬಲ್ ಟ್ರೆಸ್ಟ್ . ಜಮಾಲ್ ಅಜ್ಜಿನಡ್ಕ ಸಾಮಾಜಿಕ ಕಾರ್ಯಕರ್ತರು. ಇಸ್ಹಾಕ್ ಕೋಟೆಕಾರ್ ಕೌನ್ಸಿಲರ್ ಕೋಟೆಕಾರು ಪಟ್ಟಣ ಪಂಚಾಯತ್. ಬಾತೀಷ್ ತೆಕ್ಕರ್ ಕಾರ್ಯನಿರ್ವಾಹಕರು ಬ್ಲಡ್ ಹೆಲ್ಫ್ ಕೇರ್ ಕರ್ನಾಟಕ. ಅಬ್ದುಲ್ ರಹಿಮಾನ್ ಸದಸ್ಯರು ಗಲ್ಫ್ ಪ್ರೆಂಡ್ಸ್ ಚಾರಿಟೇಬಲ್ ಟ್ರೆಸ್ಟ್. ಫಹಿಝಲ್ ಉಸ್ತಾದ್ ಅಧ್ಯಕ್ಷರು ಎಸ್ಸೆಸ್ಸೆಫ್ ಅಜ್ಜಿನಡ್ಕ. ಇಬ್ರಾಹೀಂ ಜಿ ಎ ಸದಸ್ಯರು ಎಸ್ ವೈ ಎಸ್ ಅಜ್ಜಿನಡ್ಕ. ಮುಸ್ತಾಫ ಕೆ ಸಿ ರೋಡ್ (ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ ) ಉಪಸ್ಥಿತರಿದ್ದರು.
ಅಬ್ದುಲ್ ರಹಿಮಾನ್ ಉಸ್ತಾದ್ ಪ್ರಾರ್ಥಿಸಿದರು. ಉಸ್ತಾದ್ ಫೈಝಲ್ ಸ್ವಾಗತಿಸಿದರು. ಆಸಿಫ್ ಜಿ,ಎ,ವಂದಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.