ದುಬೈ (www.vknews.in) : ಸಾಮಾಜಿಕ ಕಾರ್ಯ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಕಳೆದ ಹಲವಾರು ವರ್ಷಗಳಿಂದ ಯು ಎ ಇ ಯಲ್ಲಿ ವರ್ಷಂಪ್ರತಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿರುವ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕರ್ನಾಟಕ ಸಮಿತಿಯು ಸೆಪ್ಟೆಂಬರ್ 04 ರಂದು ಮರ್ಹೂಂ ರಫೀಕ್ ಆತೂರ್ ರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಲತೀಫಾ ಹಾಸ್ಪಿಟಲ್ ರಕ್ತದಾನ ಕೇಂದ್ರ ಓದ್ ಮೇತಾ ದಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 3.00 ಗಂಟೆ ವರೆಗೆ ಆಯೋಜಿಸಿದೆ.
ಅನಿವಾಸಿ ರಕ್ತದಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ರಕ್ತ ದಾನ ನೀಡಿ ಇನ್ನೊಬ್ಬರ ಜೀವ ರಕ್ಷಣೆಯಲ್ಲಿ ಭಾಗಿಗಳಾಗುವಂತೆ ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ, ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕರ್ನಾಟಕ ಸಮಿತಿ ಛೇರ್ಮನ್ ನವಾಝ್ ಬಿಸಿ ರೋಡ್ , ರಕ್ತದಾನ ಶಿಬಿರ ಛೇರ್ಮನ್ ಜಲೀಲ್ ಶಾನ್ ವಿಟ್ಲ , ಉಸ್ತುವಾರಿ ಸದಸ್ಯರಾದ ಇಸಾಕ್ ಕುಡ್ತಮೊಗೇರ್ , ನಿಯಾಝ್ ಕರಾಯ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.