ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಎಲ್ಲಾ ಆಡಳಿತ ಹಂತಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಬಹಳ ಹೆಮ್ಮೆಯಿಂದ ಸ್ವಾಗತಿಸಲಾಗುವುದು.
ಇದರಿಂದ ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಇನ್ನಷ್ಟು ಸಹಕಾರ ಸಿಗಲಿದೆ ಇಂತಹ ಹೊಸ ಚಿಂತನೆಯೊಂದಿಗೆ ಕನ್ನಡವನ್ನು ಕಟ್ಟಿ ಬೆಳಸಿದ ಅಪ್ರತಿಮ ಕನ್ನಡ ಹೋರಾಟಗಾರರ ಸುದೀರ್ಘ ಹೋರಾಟಕ್ಕೆ ಲಭಿಸಿದ ಪ್ರತಿಫಲವಾಗಿದೆ.
ಎಲ್ಲರೂ ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕರಿಸೋಣ. ಕನ್ನಡವನ್ನು ಬೆಳೆಸೋಣ ಕನ್ನಡವನ್ನು ಉಳಿಸೋಣ. ಎಂದೂ ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.