ಉಡುಪಿ (www.vknews.in) : ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಎಲ್ಲೇವಿಯರ್ ಅಂತಾ ರಾಷ್ಟ್ರೀಯ ಮುದ್ರಣ ಸಂಸ್ಥೆಯ ಸಹಯೋಗದೊಂದಿಗೆ ಪ್ರತಿವರ್ಷ ನಡೆಸುವ ವಿಶೇಷ ಸಮೀಕ್ಷೆಯಲ್ಲಿ ವಿಶ್ವದ 1 ಲಕ್ಷ ಪ್ರಸಿದ್ಧ ವಿಜ್ಞಾನಿಗಳಲ್ಲಿ ಶೇ.2 ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಮೂಲತಃ ಉಡುಪಿಯ ಡಾ. ಬಿ. ಶಿವಾನಂದ ನಾಯಕ್ ಸ್ಥಾನ ಪಡೆದಿದ್ದು, ಅವರನ್ನು ವಿಶೇಷವಾಗಿ ಗುರುತಿಸಿ ಗೌರವಿಸುವ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು.
ಶ್ರೀಯುತ ನಾಯಕರ ಪಟ್ಟಾ ಶಿಷ್ಯಂದಿರರಾದ ಮೋದಿಕೇರ್ ಇಂಡಿಯಾದ ಹಿರಿಯ ನಿರ್ದೆಶಕ ಉದಯ ಶೆಟ್ಟಿ, ಚಿಕ್ಕಮ್ಮ ಜಾಹಿರಾತು ಸಂಸ್ಥೆಯ ಪಾಲುದಾರರಾದ ಪವಿತ್ರ ಶೆಟ್ಟಿ, ರಾಜ್ ಶಂಕರ್ ಇನ್ನಿತರರ ಉಪಸ್ಥಿತಿಯಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ವಿಜ್ಞಾನಿಗಳು ನಿರ್ದಿಷ್ಟ ಕ್ಷೇತ್ರದಲ್ಲಿ ನಿಯತಕಾಲಿಕದಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನಗಳು, ಸಂಶೋಧನಾ ಉಲ್ಲೇಖಗಳು, ಎಚ್-ಇಂಡೆಕ್ಸ್ ಇನ್ನಿತರ ಸಂಯೋಜಿತ ಮಾನದಂಡಗಳ ಆಧಾರದ ಮೇಲೆ ಜಾಗತಿಕವಾಗಿ ವಿಜ್ಞಾನಿಗಳನ್ನು ಗುರುತಿಸಿ ಪಟ್ಟಿ ಪ್ರಕಟಿಸಿದೆ.
ಡಾ. ಶಿವಾನಂದ ನಾಯಕ್ರ 150ಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ಮತ್ತು ಗಾಯ ಮಾಸುವಿಕೆಗೆ ಸಂಬಂಧಪಟ್ಟ ಸಂಶೋಧನಾತ್ಮಕ ಪ್ರಬಂಧಗಳು ವಿಶ್ವದ ಪ್ರಸಿದ್ಧ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡಿದ್ದಲ್ಲದೇ ಹಲವಾರು ಅಂತರಾಷ್ಟ್ರೀಯ ಬಯೋಕೆಮಿಸ್ಟ್ರಿ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿ ಸಾಧನೆ ಮಾಡಿದ್ದಾರೆ. ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಂಶೋಧನೆಗಾಗಿ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಇವರು, ಇತ್ತೀಚೆಗೆ ಮಧುಮೇಹ ಕಾಯಿಲಿಗೆ ಸಂಬಂಧಪಟ್ಟ ಉನ್ನತ ಸಂಶೋಧನೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರ್ ಆಫ್ ಸೈನ್ಸ್(ಡಿಎಸ್ಸಿ) ಅತ್ಯುನ್ನತ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಈ ಹಿಂದೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದ ಇವರು ನಂತರ ಟ್ರಿನಿಡಾಡ್ ಟೊಬ್ಯಾಗೋದ ಯುನಿವರ್ಸಿಟಿ ಆಫ್ ವೆಸ್ಟಿಂಡೀಸ್ನ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.