ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಹಿಂದೂ ಯುವತಿಯೊಂದಿಗೆ ಪ್ರಯಾಣಿಸಿದ ಆರೋಪದ ಮೇಲೆ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆಯಲ್ಲಿ ಪೊಲೀಸರು ಬಜರಂಗದಳ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮಂಗಳೂರಿನಲ್ಲಿ ಗುರುವಾರ ಈ ಘಟನೆ ನಡೆದಿದೆ.
ಸೈಯದ್ ರಜೀಂ ಉಮ್ಮರ್ ಎಂಬ 20 ವರ್ಷದ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಹಲ್ಲೆಮಾಡಲು ಆರಂಭಿಸಿದರು. ಹಲ್ಲೆಗೊಳಗಾದ ಯುವಕ ಮಂಗಳೂರು ಪೂರ್ವ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲ ಬಜರಂಗ ದಳ ಕಾರ್ಯಕರ್ತರು ರಜೀಮ್ ನನ್ನು ಬಂಧಿಸಬೇಕು ಎಂದು ಕೂಗುತ್ತಿದ್ದರು ಎಂದು ಯುವಕ ಹೇಳಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾಕಷ್ಟು ಗಮನ ಸೆಳೆದಿದೆ.
Yet another incident of #moralpolicing case reported in #Mangaluru #Karnataka. A #Muslim youth was beaten up by a group of #BajarangDal workers while he was traveling with a #Hindu girl in the bus. Incident happened near Nanthur area of the city. pic.twitter.com/Dr9XEukE5T — Imran Khan (@KeypadGuerilla) November 24, 2022
Yet another incident of #moralpolicing case reported in #Mangaluru #Karnataka. A #Muslim youth was beaten up by a group of #BajarangDal workers while he was traveling with a #Hindu girl in the bus. Incident happened near Nanthur area of the city. pic.twitter.com/Dr9XEukE5T
— Imran Khan (@KeypadGuerilla) November 24, 2022
ಹಲ್ಲೆಗಾರರ ವಿರುದ್ಧ ಪೊಲೀಸರು ಐಪಿಸಿ 323, 324, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಎನ್ಐ ವರದಿಯ ಪ್ರಕಾರ, ಖಾಸಗಿ ಬಸ್ನಲ್ಲಿ ಹಿಂದೂ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಜರಂಗದಳದ ಕಾರ್ಯಕರ್ತರ ಗುಂಪು ಹಲ್ಲೆ ನಡೆಸಿದೆ. ಘಟನೆಯಲ್ಲಿ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.