ಪಾಟ್ನಾ (www.vknews.in) | ಬಿಹಾರದ ದರ್ಭಾಂಗದ ಮದುವೆ ಪೆಂಡಾಲ್ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ನಗರದ ಬಹೇರಾ ಪ್ರದೇಶದ ಅಲಿನಗರದಲ್ಲಿ ಗುರುವಾರ ರಾತ್ರಿ 11.15 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪಟಾಕಿ ಸಿಡಿಸುವಾಗ ಮದುವೆಯ ಪೆಂಡಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರನ್ನು ಸುನಿಲ್ ಪಾಸ್ವಾನ್ (26), ಲೀಲಾ ದೇವಿ (23), ಕಾಂಚನ್ ದೇವಿ (26), ಸಿದ್ಧಾಂತ್ ಕುಮಾರ್ (4), ಶಶಾಂಕ್ ಕುಮಾರ್ (3) ಮತ್ತು ಸಾಕ್ಷಿ ಕುಮಾರಿ (5) ಎಂದು ಗುರುತಿಸಲಾಗಿದೆ. ಬೆಂಕಿಯಲ್ಲಿ ಮೂರು ಹಸುಗಳು ಸಹ ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.