ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ನಟ ಉಲ್ಲಾಸ್ ಪಂದಳಂ ಅವರ ಪತ್ನಿ ಆಶಾ (38) ಶವವಾಗಿ ಪತ್ತೆಯಾಗಿದ್ದಾರೆ. ಉಲ್ಲಾಸ್ ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ ಪಂದಳಂ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸ್ ತಂಡ ಮನೆಗೆ ಬಂದು ಪರಿಶೀಲಿಸಿದಾಗ ಆಶಾ ಮೇಲಿನ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಉಲ್ಲಾಸ್ ಮನೆಯಲ್ಲಿದ್ದಾಗ ಸಾವು ಸಂಭವಿಸಿದೆ ಎಂಬುದು ಪೊಲೀಸರಿಂದ ಸಿಕ್ಕಿರುವ ಮಾಹಿತಿ. ಹಿಂದಿನ ದಿನ ಮನೆಯ ಮೇಲಿನ ಮಹಡಿಯಲ್ಲಿ ಪತ್ನಿ ಮತ್ತು ಮಕ್ಕಳು ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಉಲ್ಲಾಸ್ ಮತ್ತು ಅವರ ಕುಟುಂಬ ಹೊಸ ಮನೆಗೆ ತೆರಳಿದ್ದರು.
ಘಟನೆಯ ಪ್ರಾಥಮಿಕ ಮಾಹಿತಿ ಇದೀಗ ಲಭ್ಯವಾಗಿದೆ. ಪೊಲೀಸರು ಹೆಚ್ಚಿನ ತನಿಖೆಗೆ ಸಿದ್ಧತೆ ನಡೆಸಿದ್ದಾರೆ. ಉಲ್ಲಾಸ್ ಪಂದಳಂ ವಿವಿಧ ವಾಹಿನಿಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ಮೂಲಕ ಮಲಯಾಳಿಗಳ ಗಮನ ಸೆಳೆದ ನಟರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.