ಮೈಸೂರು (ವಿಶ್ವ ಕನ್ನಡಿಗ ನ್ಯೂಸ್) : ಬೆತ್ತಲೆ ಚಿತ್ರಗಳನ್ನು ತೋರಿಸಿ ಬಾಲಕಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಯುವಕನನ್ನು ಆಕೆಯ ಸಹೋದರ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿ ಕಾವೇರಿ ನದಿಗೆ ಬಿಸಾಡಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಚಂದ್ರಗೌಡ ಮೃತಪಟ್ಟ ಯುವಕನಾಗಿದ್ದು, ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದ ಲಿಂಗರಾಜು ಹಾಗೂ ಎರಗನಹುಂಡಿ ಗ್ರಾಮದ ಕಿರಣ್ ಬಂಧಿತ ಆರೋಪಿಗಳು.
ಹತ್ಯೆಯಾದ ಯುವಕನ ಸೋದರಿ ಸಂಬಂಧಿ ಬಾಲಕಿ ಹಾಗೂ ಕೊಲೆ ಆರೋಪಿ ಲಿಂಗರಾಜು ಸಹೋದರಿ ವಸತಿ ಶಾಲೆಯೊಂದರಲ್ಲಿ ಸಹಪಾಠಿಗಳು. ಸೋದರಿ ಸಂಬಂಧಿ ಸಹೋದರಿಯ ಮೊಬೈಲಿನಿಂದ ಬಾಲಕಿಯ ಮೊಬೈಲ್ ನಂಬರ್ ತೆಗೆದುಕೊಂಡ ಯುವಕ ಆಕೆಯೊಂದಿಗೆ ಸ್ನೇಹ ಬೆಳೆಸಿ ಬಳಿಕ ಆಕೆಯ ನಗ್ನ ಫೋಟೋ ಸಂಗ್ರಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ.
ವಿಷಯ ತಿಳಿದ ಬಾಲಕಿಯ ಸಹೋದರ ಲಿಂಗರಾಜು, ಯುವಕನಲ್ಲಿ ತನಗೆ ಸಹೋದರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ. ಬಳಿಕ ಕೊಲೆ ಮಾಡಿ ಗೋಣಿ ಚೀಲದಲ್ಲಿ ಮೃತದೇಹವನ್ನು ಹಾಕಿ ಕಾವೇರಿ ನದಿಗೆ ಎಸೆಯಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.