(ವಿಶ್ವ ಕನ್ನಡಿಗ ನ್ಯೂಸ್) : ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿಗೆ ಬಾಲಿವುಡ್ ಸೆಲೆಬ್ರಿಟಿಗಳು ಹಾಗು ಕ್ರಿಕೆಟಿಗರು ಉಡುಗೊರೆ ನೀಡಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ಮಗಳಿಗೆ ಮುಂಬೈನಲ್ಲಿ 50 ಕೋಟಿ ಮೌಲ್ಯದ ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮದುವೆಯ ನಂತರ ನಡೆದ ಪಾರ್ಟಿಯಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಕೆಲವು ಪ್ರಮುಖ ತಾರೆಯರು ಭಾಗವಹಿಸಿದ್ದರು. ಸೆಲೆಬ್ರಿಟಿಗಳು ನವವಿವಾಹಿತರಿಗೆ ಅದ್ದೂರಿ ಉಡುಗೊರೆಗಳನ್ನು ನೀಡಿದರು.
ಬಾಲಿವುಡ್ ನಟ ಸಲ್ಮಾನ್ ಖಾನ್ 1.64 ಕೋಟಿ ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆಯ ಆರತಕ್ಷತೆಯಲ್ಲಿ ಜಾಕಿ ಶ್ರಾಫ್ ಕೂಡ ಹಾಜರಿದ್ದರು. ಅವರು 30 ಲಕ್ಷ ರೂ.ಗಳ ಸ್ವಿಸ್ ಐಷಾರಾಮಿ ಗಡಿಯಾರವಾದ ಶೋಪಾರ್ಡ್ ನೀಡಿದ್ದಾರೆ. ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ಅಥಿಯಾ ಶೆಟ್ಟಿ ಅವರ ಮದುವೆಗೆ 1.5 ಕೋಟಿ ಮೌಲ್ಯದ ವಜ್ರದ ಬ್ರೇಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರನಿಗೆ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವರದಿಗಳ ಪ್ರಕಾರ, ಇದರ ಬೆಲೆ 2.17 ಕೋಟಿ ರೂ. ಮದುವೆ ಆರತಕ್ಷತೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಹಾಜರಿದ್ದು, 80 ಲಕ್ಷ ರೂ ಮೌಲ್ಯದ ಕವಾಸಕಿ ಬೈಕ್ ನೀಡಿದ್ದಾರೆ .
ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮದುವೆಯ ನಂತರ, ಮುಂಬೈನಲ್ಲಿ ಅದ್ದೂರಿ ವಿವಾಹ ಆರತಕ್ಷತೆಯನ್ನು ಆಯೋಜಿಸಲಾಗಿತ್ತು. ಸುಮಾರು 3000 ಜನರನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.