(www.vknews.in) : ಅಧರ್ಮ, ಅನ್ಯಾಯ, ತಾಂಡವವಾಡುತ್ತಿದ್ದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ, ಇಸ್ಲಾಮ್ ಎಂಬ ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದ , ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಂ ರವರು ಸರ್ವಲೋಕಗಳಿಗೆ ಅನುಗ್ರಹವಾಗಿದ್ದಾರೆ. ಅವರು ಮಾನವ ಕುಲಕ್ಕೆ ಮಾತ್ರ ಅನುಗ್ರಹವಲ್ಲ, ಪ್ರಾಣಿ- ಪಕ್ಷಿಗಳಿಗೂ, ಸಸ್ಯ- ಲತಾದಿಗಳಿಗೂ ಅನುಗ್ರಹವಾಗಿದ್ದಾರೆ. ತಮ್ಮ ಪ್ರೀತಿ, ಮಮತೆ ಮತ್ತು ಶಾಂತಿಯ ಸಂದೇಶಗಳ ಮೂಲಕ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿ, ಅದನ್ನು ಇಡೀ ಜಗತ್ತಿಗೆ ಪಸರಿಸಿರುವ ಅದ್ಭುತ ವ್ಯಕ್ತಿಯಾಗಿದ್ದಾರೆ ಪ್ರವಾದಿ (ಸ ಅ ).
ಜಗತ್ತಿನಲ್ಲಿ ಇಂದು ಅತೀ ಹೆಚ್ಚು ಚರ್ಚೆಗೆ ಒಳಪಟ್ಟ ಧರ್ಮವು ಪವಿತ್ರ ಇಸ್ಲಾಮ್ ಆಗಿದ್ದು ಅದೇ ರೀತಿ ಅತೀ ವೇಗದಲ್ಲಿ ಬೆಳೆಯುತ್ತಿರುವ ಧರ್ಮವು ಕೂಡ ಇಸ್ಲಾಮ್ ಆಗಿದೆ. ಇಂತಹ ಪವಿತ್ರ ಧರ್ಮದ ಅನುಯಾಯಿಗಳಾದ ನಾವು ಇಂದು ಕೇವಲ ಕ್ಷುಲ್ಲಕ ಕಾರಣಗಳಿಗೆ ಒಡಹುಟ್ಟಿದ ಸಹೋದರರೆನ್ನದೆ ಪರಸ್ಪರ ಕಚ್ಚಾಟದಲ್ಲಿ ತೊಡಗಿ ಮಾನವ ಜೀವಕ್ಕೆ ಬೆಲೆ ಇಲ್ಲದಂತಾಗಿರುವಂತಹ ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದ್ ( ಸ ಅ ) ಕೇವಲ ಧರ್ಮ ಗುರು ಅಥವಾ ಸಮಾಜ ಸುಧಾರಕರಾಗಿರದೆ, ಆಡಳಿತಗಾರ, ದಂಡ ನಾಯಕ, ವ್ಯಾಪಾರಿ, ತತ್ವಜ್ಞಾನಿ, ರಾಜಕಾರಣಿ, ವಾಗ್ಮಿ, ಅನಾಥ ರಕ್ಷಕ, ಗುಲಾಮ ವಿಮೋಚಕ, ಸ್ತ್ರೀ ವಿಮೋಚಕ, ಕಾನೂನು ತಜ್ಞ, ನ್ಯಾಯಾಧೀಶ, ಶ್ರೇಷ್ಠ ಪೋಷಕರಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದು ತಾನು ಬೋಧಿಸಿದ್ದನ್ನು ಸ್ವತಃ ಆಚರಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸಿದ್ದಾರೆ.
ಇಂತಹ ಪ್ರವಾದಿ ಮುಸ್ತಫಾ ಸ ಅ ತಂಙಳ್ ರವರ ಜೀವನ ಚರ್ಯೆಯನ್ನು ಮೈಗೂಡಿಸಿಕೊಂಡು ದಾರುನ್ನೂರಿನಂತಹ ಶಿಕ್ಷಣ ಕೇಂದ್ರಗಳಿಗೆ ನೆರವಾಗುವಂತೆ ದುಬೈಯಲ್ಲಿ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಯು ಎ ಇ ಸಮಿತಿ ಹಮ್ಮಿಕೊಂಡ ಮೆಹಫಿಲ್ ಎ ಮೀಲಾದ್ ಕಾನ್ಫರೆನ್ಸ್ ಸಮಾವೇಶದಲ್ಲಿ ಹಾಫಿಝ್ ಸುಹೈರ್ ಅಝ್ಹರಿ ರವರು ಕರೆ ನೀಡಿದರು.
ದಾರುನ್ನೂರ್ ಯು ಎ ಇ ಸಮಿತಿ ವತಿಯಿಂದ ನಡೆದ ಮೀಲಾದ್ ಸಮಾವೇಶದ ಸಭಾಕಾರ್ಯಕ್ರಮದಲ್ಲಿ ಹಮೀದ್ ಮುಸ್ಲಿಯಾರ್ ನೀರ್ಕಜೆ ರವರು ಪ್ರಾರ್ಥಿಸಿ ಶುಭ ಹಾರೈಸಿದರು. ಮಾಸ್ಟರ್ ಅಹಮ್ಮದ್ ರಯೀಸ್ ರವರ ಖಿರಾಅತ್ ಪಠಣದೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ನಖೀಲ್ ಬಾಳೆಹೊನ್ನೂರ್ ರವರು ಅಥಿತಿ ಗೌರವಾನ್ವಿತರನ್ನು, ದಾರುನ್ನೂರ್ ಹಿತೈಷಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು ದಾರುನ್ನೂರಿನ ಕಿರು ಪರಿಚಯವನ್ನು ಸಭೆಯಲ್ಲಿ ವಿವರಿಸಿದರು.
ನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾರುನ್ನೂರ್ ಗೌರವ ನಿರ್ದೇಶಕರಾದ ಸಂಶುದ್ದೀನ್ ಸೂರಲ್ಪಾಡಿರವರು ಮಾತನಾಡುತ್ತಾ , ಪವಿತ್ರ ಇಸ್ಲಾಮ್ ಧರ್ಮವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಇಂದು ಯುವ ಸಮೂಹವು ಶಿಕ್ಷಣದಿಂದ ದೂರವಾಗುತ್ತಾ ಬಂದಿದ್ದು ಅನಾಚಾರ , ಅಧರ್ಮಗಳ ಕಡೆಗೆ ವಾಲುತ್ತಿದೆ. ಇಂತಹ ಸನ್ನಿವೇಶಗಳಿಂದ ಸಮುದಾಯದ ಯುವ ಸಮೂಹಯನ್ನು ಒಳಿತೆನೆಡೆಗೆ ಕೊಂಡೊಯ್ಯಲು ದಾರುನ್ನೂರ್ ಗಳಂತಹ ಅನೇಕ ಮತ ಭೌದಿಕ ವಿದ್ಯಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು ಅವುಗಳ ಯಶಸ್ಸಿನಲ್ಲಿ ತಮ್ಮಂತಹ ಅನಿವಾಸಿಗಳ ಪರಿಶ್ರಮವು ಅಭಿನಂಧನಾರ್ಹ. ದಾರುನ್ನೂರ್ ವಿದ್ಯಾ ಸಂಸ್ಥೆಯಲ್ಲಿ ದಾರುಲ್ ಹುದಾ ಶಿಕ್ಷಣ ನೀತಿಯಂತೆ ಪ್ರಭೋಧನೆ ನೀಡುತ್ತಿದ್ದು , ವಿದ್ಯಾರ್ಥಿಗಳನ್ನು ವಿವಿಧ ಭಾಷೆಗಳಲ್ಲಿ ಪರಿಣತರನ್ನಾಗಿಸುತ್ತ ಬಂದಿದ್ದು, ಮಹಿಳಾ ಶರೀಅತ್ ಕಾಲೇಜ್ ಕೂಡ ಮುಂದೆ ಪ್ರಾರಂಭಗೊಳ್ಳಲಿದೆ ಎನ್ನುತ್ತಾ ಅನಿವಾಸಿ ದೀನೀ ಸ್ನೇಹಿಗಳ ಸಹಕಾರವನ್ನು ಕೋರುತ್ತಾ ಪವಿತ್ರ ಖುರ್ಆನ್ ಸೂಕ್ತದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅಥಿತಿಗಳಾದ ರವೂಫ್ ಹಾಜಿ ಕೈಕಂಬ ರವರು ಮಾತನಾಡುತ್ತಾ ಮತ ಬೌದ್ಧಿಕ ಕ್ಷೇತ್ರದಲ್ಲಿ ದಾರುನ್ನೂರ್ ಇಂದು ಮಹತ್ತರ ಹೆಜ್ಜೆಗಳಿಡುತ್ತಾ ಬಂದಿದ್ದು, ಸಮುದಾಯವನ್ನು ವಿದ್ಯಾವಂತರನ್ನಾಗಿಸುವುದು ಇದರ ಮೂಲ ಗುರಿಯಾಗಿದೆ. ಅಜ್ಞಾನ ಅಂಧಕಾರ, ಮೂಢನಂಬಿಕೆ ಗಳಿಂದ ಪವಿತ್ರ ಇಸ್ಲಾಮ್ ಧರ್ಮವನ್ನು ಬೆಳಕಿನೆಡೆಗೆ ಬೆಳೆಸಿದ ಪ್ರವಾದಿ ವರ್ಯರು ಕೂಡ ಶಿಕ್ಷಣಕ್ಕೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಅಂತಹ ಸಂದೇಶವನ್ನು ಸಾರುತ್ತಾ ಬಂದಿರುವ ದಾರುನ್ನೂರ್ ಸಂಸ್ಥೆಯು ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅಥಿತಿ ಇಸಾಕ್ ಹಾಜಿ ತೋಡಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡುತ್ತಾ , ಕೇರಳ ಮಣ್ಣಿನಲ್ಲಿ ಶಿಕ್ಷಣ ಕ್ರಾಂತಿಯನ್ನುಂಟುಮಾಡಿದ ಮರ್ಹೂಂ ಬಾಪುಟ್ಟಿ ಹಾಜಿಯವರ ದೂರ ದೃಷ್ಟಿಯಲ್ಲಿ ಉಲಮಾ ಉಮರಾ ನೇತೃತ್ವದಲ್ಲಿ ಚೆಮ್ಮಾಡ್ ಮಣ್ಣಿನಲ್ಲಿ ತಲೆ ಎತ್ತಿದ ದಾರುಲ್ ಹುದಾ ವಿದ್ಯಾ ಸಮುಚ್ಛಯದ ಅಂಗ ಸಂಸ್ಥೆಯಾಗಿದೆ ದಾರುನ್ನೂರ್. ಇಂತಹ ಮಹಾ ಸಂಸ್ಥೆಯಲ್ಲಿ ಭಾಗಿಗಳಾಗಿರುವ ತಾವೆಲ್ಲರೂ ಅಭಿನಂಧನಾರ್ಹರು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಷರೀಫ್ ಕಾವು , ಅಹಮ್ಮದ್ ಬಾವ ಮಂಗಳೂರು, ಮುಸ್ತಾಕ್ ಕದ್ರಿ , ಮೊದಲಾದವರು ಶುಭ ಹಾರೈಸಿ ಮಾತನಾಡುತ್ತಾ , ತಮ್ಮಂತಹ ದೀನೀ ಸ್ನೇಹಿಗಳ ಪ್ರೋತ್ಸಾಹದಿಂದ ಇಂದು ತಾಯಿನಾಡಿನಲ್ಲಿ ಹಲವಾರು ಸಂಸ್ಥೆಗಳು ಬಹಳ ಯಶಸ್ಸಿನಿಂದ ಮುನ್ನಡೆಯುತ್ತಿ ದ್ದು ಅವುಗಳಲ್ಲೊಂದಾಗಿದೆ ದಾರುನ್ನೂರ್. ಶೈಖುನಾ ಖಾಝಿ ಉಸ್ತಾದ್ ರವರ ಕಠಿಣ ಪರಿಶ್ರಮವಾಗಿದೆ ಇಂದು ಪ್ರಕಾಶಿಸುತ್ತಿರುವ ದಾರುನ್ನೂರ್ ಸಂಸ್ಥೆಗೆ ತಾವೆಲ್ಲರೂ ಕೈಜೋಡಿಸುವಂತೆ ವಿನಂತಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಮ್ಮದ್ ಮಾಡಾವು ರವರು ಮಾತನಾಡುತ್ತಾ , ಇಂದು ದಾರುನ್ನೂರ್ ಸಂಸ್ಥೆಯಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿದ್ದು ಶೈಖುನಾ ಖಾಝಿ ಉಸ್ತಾದ್ ರವರ ನೇತೃತ್ವದ ಆಡಳಿತ ಸಮಿತಿ, ಉತ್ಸಾಹಿ ಭೋದಕ – ಬೋಧಕೇತರ ವೃಂದ ದಿಂದ ಅತ್ಯಂತ ಯಶಸ್ವಿಯಾಗಿ ಸಂಸ್ಥೆಯು ಮುನ್ನಡೆಯುತ್ತಿದ್ದು, ಸುಸಜ್ಜಿತ ಮಸೀದಿ, ವಸತಿ ಕಟ್ಟಡಗಳನ್ನೊಳಗೊಂಡು ಸುಂದರ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿರುವ ದಾರುನ್ನೂರಿಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ವಿನಂತಿಸಿಕೊಂಡರು.
ಸಭಾ ಕಾರ್ಯಕ್ರಮದಲ್ಲಿ ದಾರುನ್ನೂರಿಗೆ ಕಳೆದ ಹಲವಾರು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಹಕರಿಸುತ್ತಾ ಬಂದಿರುವ ಶಂಸುದ್ದೀನ್ ಮೂಡಬಿದ್ರೆ ರವರಿಗೆ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು . ಅಲ್ಲದೆ ದಾರುನ್ನೂರು ವಿದ್ಯಾ ಸಂಸ್ಥೆಯನ್ನು ವಿವಿದ ಸಂಧರ್ಭಗಳಲ್ಲಿ ಪ್ರೋತ್ಸಾಹಿಸಿದ ಅಹ್ಮದ್ ಬಾವ ಮಂಗಳೂರು, ಷರೀಫ್ ದೇರಳಕಟ್ಟೆ , ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅಶ್ರಫ್ ನಾಟೆಕಲ್ , ಅಬ್ದುಲ್ ಸಲಾಂ ಬಪ್ಪಳಿಗೆ , ಅಡ್ವೋಕೇಟ್ ಇಬ್ರಾಹಿಂ ಖಲೀಲ್ , ಹಮೀದ್ ಮುಸ್ಲಿಯಾರ್ ನೀರ್ಕಜೆ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ನೇತೃತ್ವದಲ್ಲಿ ಮೌಲೂದ್ ಪಾರಾಯಣ, ಸಫ್ವಾನ್ ರವರ ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಿತು. ಕಾರ್ಯಕ್ರಮದಲ್ಲಿ ನವಾಝ್ ಬಿಸಿ ರೋಡ್ ,ಸಾಜಿದ್ ಬಜ್ಪೆ, ಷರೀಫ್ ಕೊಡಿನೀರ್, ತಾಹಿರ್ ಹೆಂತಾರ್, ಜಾಬೀರ್ ಬಪ್ಪಳಿಗೆ , ಸಮೀರ್ ಕಲ್ಲಾರೆ , ನಾಸೀರ್ ಬಪ್ಪಳಿಗೆ ,ಜಾಬೀರ್ ಬೆಟ್ಟಂಪಾಡಿ , ಶಾಹುಲ್ ಬಿ ಸಿ ರೋಡ್ , ಸುಹೈಲ್ ಹಳೆಯಂಗಡಿ ,ಇಬ್ರಾಹಿಂ ಆತೂರ್ , ಇಸ್ಮಾಯಿಲ್ ಮುಂಝಿರ್ ತಯ್ಯಿಬ್ ಹೆಂತಾರ್ ಮೊದಲಾದವರು ವಿವಿಧ ರೀತಿಯಲ್ಲಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ , ಹಾಗು ಹಿರಿಯರಿಗೆ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಅಝರ್ ಹಂಡೇಲ್ ರವರು ನಿರೂಪಿಸಿ ಸಿರಾಜ್ ಬಿ ಸಿ ರೋಡ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.