ಸುಳ್ಯ (www.vknews.in) ; ಮೂತ್ರಶಂಕೆಗೆ ತೆರಳಿದ್ದ ಏಳು ವರ್ಷದ ಬಾಲಕಿಯನ್ನು 24 ವರ್ಷದ ಯುವಕನೋರ್ವ ಅತ್ಯಾಚಾರ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರು ಎಂಬಲ್ಲಿ ವರದಿಯಾಗಿದೆ. ಆರೋಪಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ(24) ಎಂದು ಗುರುತಿಸಲಾಗಿದೆ.
ಈತ ಮಹಾರಾಷ್ಟ್ರದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರಶಂಕೆಗೆ ತೆರಳಿದ್ದ ವೇಳೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ಈ ಘಟನೆಯಲ್ಲಿ ಬಾಲಕಿ ರಕ್ತಸ್ರಾವಗೊಂಡು ತೀವ್ರವಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ನೀಡಿದ್ದು ಕೇಸು ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.