(www.vknews.in)ಯೂತ್ ಕೌನ್ಸಿಲ್ ಮಂಚಿ ಇದರ ವತಿಯಿಂದ ದೀಪಾವಳಿ ಹಬ್ಬ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಸ್ಥಳೀಯ 5 ತಂಡಗಳ ಕ್ರಿಕೆಟ್ ಲೀಗ್ ಹಮ್ಮಿಕೊಳ್ಳಲಾಯಿತು.
NSUI ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಜೀಬ್ ಕ್ರೀಡಾಕೂಟ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಯೂತ್ ಕೌನ್ಸಿಲ್ ಪ್ರಮುಖರಾದ ಫಾರೂಕ್ DN, ಶಿಹಾಬ್, ಶಮೀರ್ ಮಂಚಿ, ನಿಜಾಮ್ ಮಂಚಿ, ಮನು, ರೋಶನ್,ಸಾದಿಕ್, ಇತರ ಸದಸ್ಯರು ಉಪಸ್ಥಿತರಿದ್ದರು. ಫೈನಲ್ ಹಂತದಲ್ಲಿ ಝಿಂದ ಮಂಚಿ attacker’s ಮಂಚಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಹನೀಫ್ MA ಬಹುಮಾನ ವಿತರಣೆ ಮಾಡಿದರು. ವೇದಿಕೆಯಲ್ಲಿ Dr. ಅಫ್ನಾನ್ ಉಪಸ್ಥಿತರಿದ್ದರು. ಇಕ್ಬಾಲ್ ಮಂಚಿ ಕ್ರೀಡಾಕೂಟ ನಿರ್ವಹಿಸಿದರೆ ಯೂತ್ ಕೌನ್ಸಿಲ್ ಮಂಚಿ ಇದರ ಐವತ್ತಕ್ಕೂ ಮಿಕ್ಕಿ ಸದಸ್ಯರು ಭಾಗಿಯಾಗಿದ್ದರು. ಸ್ಥಳೀಯ ಯುವ ಕ್ರಿಕೆಟ್ ಪ್ರತಿಭೆಗಳ ಸಂಗಮ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.