(www.vknews.in) ; ಝೀ ಥಿಯೇಟರ್ ನ `ಥಿಯೇಟರ್ ಟೇಲ್ಸ್’ನಲ್ಲಿ ಮಾತಯ-ಮಂಥನ ಸಿನೆಮಾ ಸೇರಿದಂತೆ ವಿವಿಧ ರಂಗಗಳಲ್ಲಿ ತಮ್ಮದೇ ಖ್ಯಾತಿಯನ್ನು ಹೊಂದಿರುವ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು 2000 ರಲ್ಲಿ ದಿವಂಗತ ನಿರ್ದೇಶಕ ಎಕೆ ಲೋಹಿತದಾಸ್ ಅವರ ನಿರ್ದೇಶನದ `ಅರಯನ್ನಂಗಲುದೆ ವೀಡು’ ಎಂಬ ಮಲಯಾಳಂ ಚಿತ್ರದ ಮೂಲಕ ಸಿನೆಮಾ ರಂಗವನ್ನು ಪ್ರವೇಶಿಸಿದರು. ಈ ಚಿತ್ರದಲ್ಲಿ ಖ್ಯಾತ ನಾಯಕ ನಟ ಮುಮ್ಮುಟಿ ನಾಯಕನಾಗಿ ಅಭಿನಯಿದ್ದರು. ಈ ಮೂಲಕ ಲಕ್ಷ್ಮಿ ಗೋಪಾಲಸ್ವಾಮಿ ಅವರು ಬಹುಮುಖ ಪ್ರತಿಭೆಯ ನಟಿಯಾಗಿ ಹೆಸರಾಗಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಇವರು `ಕೊಚು ಕೊಚು ಸಂತೋಷಂಗಳ್’ ಚಿತ್ರದಲ್ಲಿ ಮನಮೋಹಕವಾಗಿ ನಟಿಸಿದ್ದರು. ಅವರು ಮತ್ತು ಭಾನುಪ್ರಿಯಾ ಅವರೊಂದಿಗೆ ಸೇರಿ ಸುಂದರವಾದ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸುವ ಮೂಲಕ ಮನೆ ಮಾತಾಗಿದ್ದರು. ಮಲಯಾಳಂ ಮತ್ತು ಇತರ ದಕ್ಷಿಣ ಭಾರತೀಯ ಭಾಷೆಗಳಲ್ಲಿ ತಮ್ಮ ನಟನಾ ಮತ್ತು ನೃತ್ಯ ಚಾತುರ್ಯವನ್ನು ವಿಸ್ತರಿಸಿದರು. ತಮ್ಮ ಚಲನಚಿತ್ರ ವೃತ್ತಿ ಜೀವನದ ಜೊತೆಯಲ್ಲಿ ಲಕ್ಷ್ಮಿ ಅವರು ವಿಶ್ವದಾದ್ಯಂತ ಲೈವ್ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ನೀಡಿ ಸಾಗರದಾಚೆಗೂ ತಮ್ಮ ಕಲೆಯನ್ನು ಅನಾವರಣ ಮಾಡಿದ್ದಾರೆ.
ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದವರಾದರೂ ಲಕ್ಷ್ಮಿ ಅವರು ದಕ್ಷಿಣ ಭಾರತಾದ್ಯಂತ ತಮ್ಮದೇ ಛಾಪು ಮೂಡಿಸಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಝಿ ಥಿಯೇಟರ್ ಕನ್ನಡದ ರಂಗಕರ್ಮಿಗಳನ್ನು ಜೀವನ ಪಯಣವನ್ನು ಪ್ರೇಕ್ಷಕರ ಮುಂದೆ ತರುವ `ಥಿಯೇಟರ್ ಟೇಲ್ಸ್’ ಅನ್ನು ನಡೆಸಿಕೊಡಲು ಚಿಂತನೆ ನಡೆಸುತ್ತಿರುವಾಗ ಸಂದರ್ಶನ ನಡೆಸಿಕೊಡುವವರ ಪಟ್ಟಿಯಲ್ಲಿ ಲಕ್ಷ್ಮಿ ಅವರ ಹೆಸರು ಸ್ವಾಭಾವಿಕವಾಗಿ ಮೊದಲ ಆಯ್ಕೆಯಾಗಿತ್ತು. ಪ್ರಸ್ತುತ ಟಿವಿ ಶೋಗಳತ್ತ ಗಮನಹರಿಸಿದ್ದರೂ ಲಕ್ಷ್ಮಿ ಅವರಲ್ಲಿ ತಮ್ಮ ನೃತ್ಯ ಇನ್ನೂ ಪ್ಯಾಶನ್ ಆಗಿ ಉಳಿದಿದೆ.
“ನನ್ನ ನೃತ್ಯ ಶೈಲಿಯು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ ಮತ್ತು ನಾನು ಅದರ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದೇನೆ. ವೈಜಯಂತಿಮಾಲಾ ಅವರು ನನ್ನ ಆರಾಧ್ಯದೈವವಾಗಿದ್ದಾರೆ ಮತ್ತು ಶಾಸ್ತ್ರೀಯತೆಗೆ ಅವರಿಗಿದ್ದ ಬದ್ಧತೆ ನನಗೆ ಸ್ಫೂರ್ತಿಯನ್ನು ನೀಡುತ್ತಿದೆ. ಅವರ ಅಭಿವ್ಯಕ್ತಿತ್ವ ಮತ್ತು ಅಭಿನಯವು ಅನುಕರಣೀಯವಾಗಿದೆ’’ ಎಂದು ಲಕ್ಷ್ಮಿ ಹೇಳುತ್ತಾರೆ.
ವೃತ್ತಿಜೀವನದಲ್ಲಿ ವೈಯಕ್ತಿಕ ಅನುಭವಗಳಿಂದ ಪಡೆದ ಒಳನೋಟಗಳು ಪಾತ್ರಗಳ ಯಶಸ್ವಿ ಚಿತ್ರಣಕ್ಕೆ ಕೊಡುಗೆಯನ್ನು ನೀಡುತ್ತವೆ ಎಂದು ಹೇಳುವ ಅವರು, ನಿಜ ಜೀವನದಲ್ಲಿ ವೈಯಕ್ತಿಕವಾಗಿ ಇದೇ ರೀತಿಯ ಪರಿಸ್ಥಿತಿಗೆ ಒಳಗಾದ ನಂತರದಲ್ಲಿ ಕ್ಯಾಮೆರಾದಲ್ಲಿ ಪಾತ್ರದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಭಾರೀ ವ್ಯತ್ಯಾಸವಿರುತ್ತದೆ.
ಉದಾಹರಣೆಗೆ, ಒಂದು ಚಿತ್ರದಲ್ಲಿ ನಾನು ಒಂದು ಚಿತ್ರದಲ್ಲಿ ಆಕ್ರಮಣಕಾರಿಯಾಗಿ ನಟಿಸಬೇಕಿತ್ತು. ಮತ್ತೊಬ್ಬ ನಟರಿಗೆ ಕಪಾಳಮೋಕ್ಷ ಮಾಡುವ ದೃಶ್ಯವದು. ಆದರೆ, ಎಲ್ಲರಂತೆಯೇ ನನಗೂ ಅದು ಸವಾಲಿನ ಕೆಲಸವಾಗಿತ್ತು. ಅದೃಷ್ಟವಶಾತ್, ನಿರ್ದೇಶಕರು ಮತ್ತು ಸಹಕಲಾವಿದರು ಆ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನನಗೆ ಬೆಂಬಲ ನೀಡಿದರು ಮತ್ತು ಯಶಸ್ವಿಯಾಗಿ ಚಿತ್ರೀಕರಣ ಪೂರ್ಣಗೊಂಡಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಅಲ್ಲಿಂದ ಇತರರ ಅಭಿಪ್ರಾಯಗಳು ಅಥವಾ ನಿರ್ಧಾರಗಳ ಬಗ್ಗೆ ಕಾಳಜಿಗೆ ಆದ್ಯತೆ ನೀಡಲಾರಂಭಿಸಿದೆ ಎಂದು ತಿಳಿಸುತ್ತಾರೆ.
ಕಲೆಗಳ ಪ್ರದರ್ಶನ, ಪ್ರಾವೀಣ್ಯತೆಯನ್ನು ಪಡೆದುಕೊಳ್ಳುವುದು, ಅದರಲ್ಲೂ ವಿಶೇಷವಾಗಿ ರಸಗಳಲ್ಲಿ ನೆಲೆಗೊಂಡಿರುವುದು, ರಂಗಭೂಮಿ, ಚಲನಚಿತ್ರಗಳು ಮತ್ತು ಇತರ ಮಾಧ್ಯಮಗಳಲ್ಲಿ ಪಾತ್ರಗಳ ಚಿತ್ರಣಕ್ಕೆ ಗಮನಾರ್ಹವಾದ ಕೊಡುಗೆ ನೀಡುತ್ತದೆ ಎಂದು ಅವರು ಹೇಳುತ್ತಾರೆ.
“ಒಂದು ನಿರ್ದಿಷ್ಟವಾದ ಪಾತ್ರವನ್ನು ಚಿತ್ರಿಸುವ ಸಂದರ್ಭದಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ನಾವು ಸನ್ನಿವೇಶದ ಆಧಾರದ ಮೇಲೆ ವಿವಿಧ ಭಾವನೆಗಳನ್ನು ಅಳವಡಿಸಿಕೊಳ್ಳುತ್ತೇವೆ.
ಒಂದು ಪಾತ್ರವಾಗಿ ಯೋಚಿಸುತ್ತೇವೆ, ವರ್ತಿಸುತ್ತೇವೆ ಮತ್ತು ಭಾವಿಸುತ್ತೇವೆ. ತಮ್ಮ ಪ್ರದರ್ಶನಗಳಿಗೆ ಕ್ರಿಯಾತ್ಮಕವಾದ ಆಳವನ್ನು ಸೇರಿಸುವ ಭಾವನೆಗಳನ್ನು ತಿಳಿಸಲು ಸ್ವರಗಳನ್ನು ಕೌಶಲ್ಯದಿಂದ ಬಳಸುವ ರಂಗಭೂಮಿ ಕಲಾವಿದರನ್ನು ನಾನು ನಿಜವಾಗಿಯೂ ಮೆಚ್ಚಿಕೊಳ್ಳುತ್ತೇನೆ. ಯಾವುದೇ ಕಲಾತ್ಮಕ ಅಭಿವ್ಯಕ್ತಿಯಲ್ಲಿ ಅಧಿಕೃತತೆ ಮತ್ತು ಪ್ರಾಮಾಣಿಕತೆ ಅತ್ಯುನ್ನತವಾಗಿರುತ್ತದೆ; ಪ್ರತಿಯೊಂದು ಕ್ರಿಯೆ ಅಥವಾ ಭಾವನೆಯು ಆಂತರ್ಯದಿಂದ ಹೊರಹೊಮ್ಮಬೇಕಾಗುತ್ತದೆ’’ ಎಂದು ಹೇಳಿದರು. ಈ ಶೋನಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ ಅವರು ರಂಗಭೂಮಿ ಕಲೆಗಳ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಅದರ ಬಗ್ಗೆ ಅವರ ವಿಶೇಷ ಪ್ರೀತಿಯ ಬಗ್ಗೆ ಮಾತನಾಡಲಿದ್ದಾರೆ.
“ಶಾಲೆಯಲ್ಲಿ 12 ನೇ ತರಗತಿಯಲ್ಲಿ ನಾನು ಮೊದಲ ಬಾರಿಗೆ ನಾಟಕದಲ್ಲಿ ನಟಿಸಿದ್ದೇನೆ. ಚಿಕ್ಕಂದಿನಿಂದಲೂ ನೃತ್ಯ ಕಲಿತು ಹಲವಾರು ನೃತ್ಯ ನಾಟಕಗಳಲ್ಲಿ ಭಾಗವಹಿಸಿದ್ದ ನಾನು ಹೊಸದನ್ನು ಅನ್ವೇಷಣೆ ಮಾಡಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ನಾನು ರಂಗಭೂಮಿಯತ್ತ ಸೆಳೆಯಲ್ಪಡುತ್ತೇನೆ. ಸಂಪೂರ್ಣ ನನ್ನನ್ನು ನಾನು ತೊಡಗಿಸಿಕೊಂಡು ಪಾತ್ರವನ್ನು ಪ್ರಸ್ತುತಪಡಿಸುತ್ತೇನೆ. ಇದು ಪ್ರೇಕ್ಷಕರಿಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ’’ ಎಂದು ಅವರು ತಿಳಿಸಿದರು.
ಲಕ್ಷ್ಮಿ ಗೋಪಾಲಸ್ವಾಮಿ ಅವರನ್ನೊ ಒಳಗೊಂಡಿರುವ `ಥಿಯೇಟರ್ ಟೇಲ್ಸ್’ ಸಂಚಿಕೆಯು ಡಿಸೆಂಬರ್ 24 ರಂದು ಟಾಟಾ ಪ್ಲೇ ಥಿಯೇಟರ್ ನಲ್ಲಿ ಪ್ರಸಾರವಾಗಲಿದೆ ಮತ್ತು ಅದರ ಮುಂದಿನ ಶುಕ್ರವಾರ ಝೀ ಥಿಯೇಟರ್ ನ ಯೂಟ್ಯೂಬ್ ಪೇಜ್ ನಲ್ಲಿ ಪ್ರಸಾರವಾಗಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.