ಕಾಸರಗೋಡು (www.vknews.in) : ಕಾಸರಗೋಡಿನ ಕುಂಬಳೆಯಲ್ಲಿ ಪೊಲೀಸರು ಹಿಂಬಾಲಿಸುವ ವೇಳೆ ಕಾರು ಪಲ್ಟಿಯಾಗಿ ವಿದ್ಯಾರ್ಥಿ ಮೊಹಮ್ಮದ್ ಫರ್ಹಾಸ್ ಸಾವನ್ನಪ್ಪಿದ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ನರಹತ್ಯೆ ಪ್ರಕರಣ ದಾಖಲಾಗಿದೆ.
ಬಾಲಕನ ತಾಯಿಯ ದೂರಿನ ಮೇರೆಗೆ ಕಾಸರಗೋಡು ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಕುಂಪಲ ಎಸ್ ಐ ಎಸ್.ಆರ್.ರಜಿತ್, ಸಿಪಿಒಗಳಾದ ಟಿ. ದೀಪು, ಪಿ. ರಂಜಿತ್ ವಿರುದ್ಧ ಐಪಿಸಿ 304ಎ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಸಮನ್ಸ್ ಕಳುಹಿಸಿದೆ.
ಅಂಗಡಿಮುಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಫರ್ಹಾಸ್ ಮತ್ತು ನಾಲ್ವರು ಸ್ನೇಹಿತರಿದ್ದ ಕಾರು ಕಳೆದ ವರ್ಷ ಆಗಸ್ಟ್ 25 ರಂದು ಪೊಲೀಸರು ಹಿಂಬಾಲಿಸುವಾಗ ಅಪಘಾತಕ್ಕೀಡಾಗಿತ್ತು. ಫರ್ಹಾಸ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಬಾಲಕನ ತಾಯಿ ಸಫಿಯಾ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಕ್ರಮ. ಈ ಹಿಂದೆ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಘಟನೆಯ ತನಿಖೆ ನಡೆಸಿದ್ದರು. ಫರ್ಹಾಸ್ ಸಾವಿನಲ್ಲಿ ಪೊಲೀಸರಿಂದ ಯಾವುದೇ ತಪ್ಪಿಲ್ಲ ಎಂದು ಅಪರಾಧ ವಿಭಾಗದ ತನಿಖಾ ವರದಿ ಹೇಳಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.