(www.vknews. in) ; ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಮುಂಭಾಗದಲ್ಲಿ ಮತ್ತು 79ನೇ ವಾರ್ಡ್ ಸಮಿತಿ ವತಿಯಿಂದ ಎಸ್ ಎಂ ಕೃಷ್ಣ ನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂವಿಧಾನ ದೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಮಕ್ತುಮ್ ಹುಸೇನ್ ಹೊಸಮನಿ ಪ್ರಸ್ತಾವಿಕವಾಗಿ ದೇಶದ ಬಗ್ಗೆ ಮಾತನಾಡಿದರು. ಅದೇ ರೀತಿ ಸಂವಿಧಾನ ದೀಕ್ಷೆಯನ್ನು ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ ಅವರ ನೆರವೇರಿಸಿದರು.
ಈ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಲ್ಮಾ ಮುಲ್ಲಾ, ದಲಿತ ನಾಯಕರು ದೇವೇಂದ್ರಪ್ಪ ಇಟಗಿ, ಪರಶುರಾಮ್ ದೊಡ್ಡಮನಿ, ಎಸ್ ಎಂ ಕೃಷ್ಣ ನಗರದ ಜಮಾತಿನ ಹಿರಿಯರು ಅಬ್ದುಲ್ ಪಾಟೀಲ್, ಎಸ್ ಡಿ ಟಿ ಯು ಅಧ್ಯಕ್ಷರಾದ ಜಹೀರ್ ಜಮಖಂಡಿ ಮತ್ತು ಎಸ್ಡಿಪಿಐ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ ಲಷ್ಕರ್, ಕಾರ್ಯದರ್ಶಿ ಸುಹೇಲ್ ಇಂಗಳಗಿ, ಜಿಲ್ಲಾ ಕೋಶಾಧಿಕಾರಿ ಮಲೀಕ ಜಾನ್ ಕಳಸ, ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುಲ್ ಜಬ್ಬಾರ್ ಲಷ್ಕರ್ ಮತ್ತು 79ನೇ ವಾರ್ಡಿನ ಅಧ್ಯಕ್ಷರಾದ ಫಯಾಜ್ ಬೈರಿಕೊಪ್ಪ & ಕಾರ್ಯದರ್ಶಿ ಸಾಧಿಕ್ ಕಲಬುರ್ಗಿ ಮತ್ತು ಬ್ರಾಂಚಿನ ಅಧ್ಯಕ್ಷರು & ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.