ತ್ರಿಕರಿಪುರ (www.vknews.in) ; ಅಸ್ವಸ್ಥಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅನಿವಾಸಿ ಪುತ್ರ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ವಲಿಯಪರಂ ಹನ್ನೆರಡರ ಎಂ.ಕೆ.ಅಹ್ಮದ್ ಮತ್ತು ನೂರ್ಜಹಾನ್ ದಂಪತಿಯ ಪುತ್ರ ಅಲ್ತ್ವಾಫ್ (26) ಮೃತಪಟ್ಟ ಯುವಕ.
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಶನಿವಾರ ಮಧ್ಯಾಹ್ನ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
ಮೃತದೇಹವನ್ನು ಮನೆಗೆ ತಂದು ಬಳಿಕ ವಲಿಯಪರಂ ಜುಮಾ ಮಸೀದಿ ಕಬರಸ್ಥನದಲ್ಲಿ ದಫನ ನಡೆಸಲಾಯಿತು.
ವಿದೇಶದಲ್ಲಿದ್ದ ಅಲ್ತ್ವಾಫ್ ತನ್ನ ಮದುವೆಗೆ ಸಂಬಂಧಿಸಿದ ಕಾರಣಗಳಿಗಾಗಿ ವಾರದ ಹಿಂದೆ ಊರಿಗೆ ಬಂದಿದ್ದರು. ದಂಪತಿಯ ನಾಲ್ವರು ಮಕ್ಕಳಲ್ಲಿ ಒಬ್ಬನೇ ಗಂಡು ಮಗು ಆಗಿದ್ದ ಯುವಕ ಇದೀಗ ಮೃತಪಟ್ಟಿದ್ದಾರೆ. ಸಹೋದರಿಯರು: ಶಬಾನಾ, ಅಫ್ಸಾನಾ ಮತ್ತು ಮರ್ಯಮ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.