ಬಂಟ್ವಾಳ (www.vknews. in): ಮೂಲರಪಟ್ಣ ಜಿ.ಹೆಚ್. ಎಂ ಫೌಂಡೇಶನ್ (ರಿ) ಇದರ ವತಿಯಿಂದ 2024 ನೇ ಸಾಲಿನ ಮಾಸಿಕ ರೇಶನ್ ಕಿಟ್ ವಿತರಣೆ ಹಾಗೂ ಬೆಂಚ್ ಡೆಸ್ಕ್ ವಿತರಣಾ ಕಾರ್ಯಕ್ರಮ ಇಲ್ಲಿನ ದಾರೂಲ್ ಉಲೂಂ ಮದರಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮೂಲರಪಟ್ಣ ಕೇಂದ್ರ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಮಾತನಾಡಿ, ಜಿ.ಹೆಚ್.ಎಂ ಫೌಂಡೇಶನ್ ನಮ್ಮ ಜಮಾಅತ್ ನಾ ಹೆಮ್ಮೆಯ ಸಂಸ್ಥೆಯಾಗಿದ್ದು ಬಡವರ ಹಸಿವನ್ನು ನೀಗಿಸುವ ಮಹತ್ವದ ದೂರ ದೃಷ್ಟಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮಾಸಿಕ ರೇಷನ್ ಕಿಟ್ ಯೋಜನೆ ಯಾವುದೇ ಜಾತಿ ಮತ ಭೇದವಿಲ್ಲದೆ ನಿರಂತರವಾಗಿ ನಡೆಯುತ್ತಿದ್ದು ಅದರ ಅರ್ಹ ಫಲಾನುಭವಿಗಳಿಗೆ ವಿತರಿಸುವ ಇಂತಹ ಮಹತ್ಕಾರ್ಯ ಯೋಜನೆ ಶ್ಲಾಘನೀಯ ಎಂದರು.
ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಗೂ ಫೌಂಡೇಶನ್ ನ ಗೌರವ ಸಲಹೆಗಾರ ಎಮ್.ಬಿ.ಅಶ್ರಫ್, ಜಿ.ಹೆಚ್.ಎಂ ಫೌಂಡೇಶನ್ ಇದರ ಅಧ್ಯಕ್ಷ ಮೊಹಮ್ಮದ್ ಶಾಲಿ, ಹೀವೆಂಟ್ ಹೆಡ್ ಎಮ್.ಬಿ ಇಸ್ಮಾಯಿಲ್ ಶಾಫಿ, ಎಕ್ಸಿಕ್ಯೂಟಿವ್ ಹೆಡ್ ಹಂಝ ಗುತ್ತು, ಡಾಟಾ ಎಂಟ್ರಿ ಎಕ್ಸಿಕ್ಯೂಟಿವ್ ಶಾಹುಲ್ ಹಮೀದ್ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಬಾವಾಕ ವಾರಟೀಲು ಕಾರ್ಯದರ್ಶಿ ಶಿಹಾಬುದ್ದೀನ್ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಮ್.ಎಸ್ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.