ಬಂಟ್ವಾಳ (www.vknews. in): ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿ ಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡುವಂತಿಲ್ಲ. ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ ಹಿಡಿಯುತ್ತದೆ. ಇನ್ಮುಂದೆ ಸಾರಿಗೆ ನಿಯಮಗಳನ್ನು ಮೀರಿ ಚಾಲನೆ ಮಾಡಿ ಸಿಕ್ಕಿಬಿದ್ದರೆ, ಏನಿದ್ದರೂ ದಂಡ ಕಟ್ಟುವುದು ಒಂದೇ ದಾರಿ.
ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ದಂಡ ವಸೂಲಿ ಮಾಡುವ ಅಧಿಕಾರಿಗಳಿಗೆ ನಾಲ್ಕು ಶರೀರದ ಮೇಲೆ ಅಳವಡಿಸುವ (Body Worn Camara) ಕ್ಯಾಮರಾ ಇಲಾಖೆ ನೀಡಿದ್ದು, ಇದೀಗ ಪೋಲೀಸರ ಮೇಲೆ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ.
ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಅನಾವಶ್ಯಕವಾದ ವಾದ ವಿವಾದಗಳನ್ನು ತಡೆದು ನ್ಯಾಯಪರವಾಗಿ ಕಾರ್ಯನಿರ್ವಹಿಸಲು ಇಲಾಖೆ ಒಂದು ಉತ್ತಮ ವ್ಯವಸ್ಥೆ ಮಾಡಿದೆ.
ರಸ್ತೆಯಲ್ಲಿ ನಡೆಯುವ ಅನೇಕ ವಿಚಾರಗಳಿಗೆ ಈ ಕ್ಯಾಮರಾ ಉಪಯೋಗವಾಗಲಿದ್ದು, ಕನಿಷ್ಠ 24 ಗಂಟೆಯವರೆಗೆ ಇದು ಕಾರ್ಯಚರಿಸುತ್ತದೆ. ಉತ್ತಮ ಗುಣಮಟ್ಟದ ಕ್ಯಾಮರಾ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.