(www.vknews. in) ; 2024 -25 ನೇ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನ ಶಾಲಾ ಸ್ವಚ್ಛತೆಗೆ ಪ್ರಧಾನ ಪ್ರಾಶಸ್ತ್ಯವನ್ನು ಕೊಡುವ ಉದ್ದೇಶದಿಂದ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದೇವಶ್ಯ ಮೂಡೂರು ಇಲ್ಲಿ ದಿನಾಂಕ 26 -5-24 ರಂದು ಊರವರ ಸಹಭಾಗಿತ್ವದೊಂದಿಗೆ ಶ್ರಮಾದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ಕಟ್ಟಡದ ಆಸು ಪಾಸಿನಲ್ಲಿ ವಿಶಾಲವಾಗಿ ಹಬ್ಬಿಕೊಂಡಿದ್ದ ಮರದ ಗೆಲ್ಲುಗಳ ತೆರವು, ನೀರಿನ ಟ್ಯಾಂಕಿನ ಸ್ವಚ್ಛತೆ, ಶಾಲಾ ಆವರಣದ ಸ್ವಚ್ಛತೆಯನ್ನು ಬೆಳಗ್ಗಿನಿಂದ ಸಂಜೆಯವರೆಗೆ ಹಮ್ಮಿಕೊಳ್ಳಲಾಗಿತ್ತು. ‘ನಮ್ಮ ಶಾಲೆ ,ನಮ್ಮ ಜವಾಬ್ದಾರಿ’ ಎನ್ನುವಂತಹ ಉದ್ದೇಶವನ್ನು ಇರಿಸಿಕೊಂಡು ಸ್ಥಳೀಯ ಸಂಸ್ಥೆಯಾದ ‘ಓಂ ಶಕ್ತಿ ಬಳಗ’ ಶಾಲಾ ಸ್ವಚ್ಛತೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿತ್ತು. ಹಾಗೆಯೇ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ,ಪೋಷಕರು ,ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ವಿದ್ಯಾಭಿಮಾನಿಗಳು ಈ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲಾರಂಭದಲ್ಲಿ ಶಾಲೆಯನ್ನು ಎದುರುಗೊಳ್ಳಲಿರುವ ಪುಟಾಣಿ ಮಕ್ಕಳಿಗೆ ಸ್ವಚ್ಛ ಶಾಲೆಯ ಮುಖ ಕಾಣುವಂತೆ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.