(www.vknews. in) ; ಪವಿತ್ರ ಬಕ್ರೀದ್ ಹಬ್ಬಕ್ಕೂ ನ್ಯಾಯಯುತ ಕುರ್ಬಾನಿ ಜಾನುವಾರುಗಳ ಸಾಗಾಟಕ್ಕೆ ಅವಕಾಶ ನೀಡಬೇಕೆಂದು, ಕುರ್ಬಾನಿಗೆ ಸೂಕ್ತ ರಕ್ಷಣೆಯನ್ನು ನೀಡುವಂತೆಯೂ ,ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆಯೂ,ಬೋಳಿಯಾರ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ನಿರಪರಾಧಿ ಅಮಾಯಕರಿಗೆ ಯಾವ ತೊಂದರೆಯೂ ಆಗದಂತೆ ನಿಗಾ ವಹಿಸುವಂತೆ ಕೋರಿ.
ಈ ಮೂಲಕ ತಿಳಿಯಪಡಿಸುವುದೇನೆಂದರೆ, ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ (ಈದುಲ್ ಝುಹಾ) ಬಕ್ರೀದ್ ಹಬ್ಬವು ಇದೇ ತಿಂಗಳ ತಾರೀಕು 17-06-2024 ರಂದು ಆಚರಿಸಲ್ಪಡುತ್ತಿದ್ದು ಈ ಸಂದರ್ಭದಲ್ಲಿ ಅರ್ಹರು ಕುರ್ಬಾನಿ ನೀಡುತ್ತಿರುವುದು ಕಡ್ಡಾಯವಾಗಿರುತ್ತದೆ.ಈ ಸಮಯ ಕುರ್ಬಾನಿ ಜಾನುವಾರುಗಳ ಸಾಗಾಟ ಸಾಮಾನ್ಯವಾಗಿರುತ್ತದೆ.ಸರಕಾರದ ನಿಯಮಾನುಸಾರ ಜಾನುವಾರು ಸಾಗಾಟಕ್ಕೆ ಸಹಕರಿಸಬೇಕೆಂದು,ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಬೇಕೆಂದು ಹಾಗೂ ಬಕ್ರೀದ್ ಹಬ್ಬ ಆಚರಣೆಯೊಂದಿಗೆ ಕುರ್ಬಾನಿಗೆ ಸೂಕ್ತ ರಕ್ಷಣೆ ನೀಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇತ್ತೀಚೆಗೆ ಬಿಜೆಪಿ ವಿಜಯೋತ್ಸವದಲ್ಲಿ ಪ್ರಚೋದನಕಾರಿ ಘೋಷಣೆ ಹಾಗೂ ನಂತರ ಚೂರಿ ಇರಿತದ ಪ್ರಕರಣವು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆಯೂ,ಅಮಾಯಕರಿಗೆ ನಿರಪರಾಧಿಗಳಿಗೆ ಯಾವ ತೊಂದರೆಯೂ ಆಗದಂತೆ ಪ್ರಕರಣದಲ್ಲಿ ಅಪರಾಧಿಗಳ ಕೃತ್ಯಗಳಿಗೆ ಭಾಗವಹಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ.
ಎಂದು ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿ ಅಬ್ದುಲ್ ರೆಹ್ಮಾನ್ ಜಿಲ್ಲಾ ಕೋಶ ಅಧಿಕಾರಿ ರಿಯಾಝ್ ಹರೇಕಳ ಉಪಾಧ್ಯಕ್ಷ ಎಚ್ ಮೊಹಮ್ಮದ್ ಇಸ್ಮಾಯಿಲ್ ಯೂಸುಫ್ ಮಂಗಳೂರು ತೋಡಾರ್ ಮುಸ್ಲಿಂ ಲೀಗ್ ಸಂಘಟನೆ ಸದಸ್ಯ ಮುಸ್ತಫಾ ತೋಡರ್ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.