ಬಂಟ್ವಾಳ (www.vknews. in) : ಮಾರ್ನಬೈಲು ಮೆಲ್ಕಾರ್ ಪದವಿ ಕಾಲೇಜಿನ ಮಾನವ ಹಕ್ಕುಗಳ ರಕ್ಷಣಾ ಘಟಕದ ವತಿಯಿಂದ ಮಾಹಿತಿ ಕಾರ್ಯಕ್ರಮ ಇತ್ತೀಜೆಗೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಫಯಾಜ್ ದೊಡ್ಡಮನೆ ಮಾತನಾಡಿ, ಭಾರತೀಯ ಸಂವಿಧಾನವು ಪ್ರತಿಯೊಬ್ಬನಿಗೂ ಅನೇಕ ಹಕ್ಕುಗಳನ್ನು ನೀಡಿದೆ. ಆದರೂ ಅನೇಕ ಸಂದರ್ಭಗಳಲ್ಲಿ ಈ ಹಕ್ಕುಗಳ ಹರಣವಾಗುತ್ತಿದ್ದು ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಕುರಿತು ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಾಗ್ರತವಾಗಿ ಇರಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಹ ಸಂಯೋಜಕಿ ಉಪನ್ಯಾಸಕಿ ರಕ್ಷಿತಾ ಕುಮಾರಿ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಮಾನವ ಹಕ್ಕುಗಳ ರಕ್ಷಣೆ ಕುರಿತು ಕಿರು ಪ್ರಹಸನಗಳನ್ನು ಪ್ರದರ್ಶಿಸಿದರು. ಘಟಕದ ಸಂಯೋಜಕಿ, ಉಪನ್ಯಾಸಕಿ ಕಲಾವತಿ ಪ್ರಾಸ್ತಾವನೆಗೈದರು. ವಿದ್ಯಾರ್ಥಿನಿಯರಾದ ಫಾತಿಮತ್ ಶೈಮ ಸ್ವಾಗತಿಸಿ, ಅಸ್ಬಾಹುನ್ನಿಸ ವಂದಿಸಿದರು. ಮಶ್ಮೂಮ ಫಾತಿಮಾ ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.