ಉಳ್ಳಾಲ (www.vknews. in) : ಉಚ್ಚಿಲ ರಹ್ಮಾನಿಯಾ ದಿಂದ ಅಜ್ಜಿನಡ್ಕ ಸೇರುವ ರಸ್ತೆ ಹದಗೆಟ್ಟು ವರ್ಷಗಳಾದರೂ ಕಾಮಗಾರಿ ನಡೆದಿಲ್ಲ..ಅಜ್ಜಿನಡ್ಕ ರಸ್ತೆಯುದ್ದಕ್ಕೂ ಬೃಹತ್ ಹೆಸರುವಾಸಿಯಾದ ಗಾರ್ಡನ್ ಗಳು ರೆಸಿಡೆನ್ಸಿಗಳು ಇತರ ಕಾರ್ಕಾನೆಗಳು ಇದ್ದು ಇವರದ್ದೇ ಹಲವಾರು ವಾಹನಗಳು ಸಂಚರಿಸುವುದಾದರೂ ಈ ರಸ್ತೆಯನ್ನು ಸರಿ ಮಾಡುವ ಯಾವುದೇ ಆಲೋಚನೆಯೂ ಅವರಲ್ಲಿಲ್ಲ…
ಕಣ್ಣುಕಟ್ಟಿಗಾಗಿ ಇಷ್ಟು ಮಣ್ಣು ಸುರಿಸಿ ಇರುವ ರಸ್ತೆಯನ್ನೂ ಮರಣದ ಮಂಟಪವನ್ನಾಗಿ ಮಾಡಿದ ಹಾಗೆ ಇದೆ..ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದೂ ಹಲವಾರು ಮಕ್ಕಳು ಇದೇ ಕೆಸರಿನ ರಸ್ತೆಯಲ್ಲಿ ನಡೆದುಕೊಂಡು ಹಾಗೂ ವಾಹನದಲ್ಲಿ ಹೋಗುತ್ತಿದ್ದಾರೆ …ಆದಷ್ಟು ಬೇಗ ಆ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಥವಾ ರಸ್ತೆಯುದ್ದಕ್ಕೂ ಇರುವ ಬ್ಯುಸಿನೆಸ್ ಸಂಸ್ಥೆಗಳು ಎಚ್ಚತ್ತುಕೊಂಡು ಕಾಮಗಾರಿ ನಡೆಸಿ ಜನರಿಗೆ ಅನುಕೂಲಕರಮಾಡಿಕೊ ಡಬೇಕೆಂಬುದು ನಾಗರಿಕರ ಅಭಿಪ್ರಾಯ.
ಸಲೀಂ ಕೆ ಎ ಅಜ್ಜಿನಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.