ಬಂಟ್ವಾಳ (www.vknews.in) : ಬಕ್ರೀದ್ ಹಬ್ಬದ ಶುಭ ಸಂಧರ್ಭದಲ್ಲಿ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿಗೆ ಸೌಹಾರ್ದ ಭೇಟಿ ಕೊಟ್ಟು ಶುಭ ಹಾರೈಸಿದ ಇನ್ಫೆಂಟ್ ಜೀಸಸ್ ಚರ್ಚ್ ಮೊಡಂಕಾಪು, ಪ್ರಧಾನ ಧರ್ಮಗುರುಗಳು ರೆ|ಫಾ|ವಲೇರಿಯನ್ ಡಿಸೋಜಾ, ಕೇಂದ್ರ ಜುಮಾ ಮಸೀದಿ ಖತೀ ಬರಾದ ಅಶ್ರಫ್ ಫೈಝಿ ಅವರಿಗೆ ಹೂ ಗುಚ್ಚ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಂ ಜೆ ಎಂ ಮುದರ್ರೀಸ್ ರಾದ ಉಮರ್ ಫಾರೂಕ್ ಫೈಝಿ, ಜಮಾತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಉಪಾಧ್ಯಕ್ಷರುಗಳಾದ ಜಮಾಲ್, ಲತೀಫ್ ಸಫಾ,ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಕಾರ್ಯದರ್ಶಿ ಇಕ್ಬಾಲ್ ನಂದರ ಬೆಟ್ಟು ಹಾಗೂ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ನಿಯೋಗದಲ್ಲಿ ಸಹಾಯಕ ಧರ್ಮಗುರುಗಳು ಫಾ|ಲ್ಯಾನ್ಸಿ ಡಿಸೋಜಾ , ಪ್ರಾಂಶುಪಾಲರಾದ ಫಾ|ಮೆಲ್ವಿನ್ ಲೋಬೊ, ಉಪಾಧ್ಯಕ್ಷರಾದ ಶ್ರೀ ಸುನಿಲ್ ವೇಗಸ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮನೋಹರ್ ಡಿಕೋಸ್ತಾ, ವಿವಿಧ ಆಯೋಗಗಳ ಸಂಯೋಜಕಿ ಶ್ರೀಮತಿ ವೀಣಾ ಗೋಲ್ಭರ್ಟ್ ಗೋವಿಯಸ್, ಕಥೋಲಿಕ್ ಸಭಾ ಸಂಘಟನೆಯ ಆಧ್ಯಕ್ಷರಾದ ಶ್ರೀ ಸಿರಿಲ್ ನೊರೋನ್ಹಾ ಹಾಗೂ ವಿವಿಧ ಆಯೋಗಗಳ ಸಂಚಾಲಕರು ಮತ್ತು ಚರ್ಚ್ ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.